ಕಡಂದಲೆ ಸುರೇಶ್ ಎಸ್.ಭಂಡಾರಿ ನೂತನ ಅಧ್ಯಕ್ಷ - ಐಕಳ ಹರೀಶ್ ಶೆಟ್ಟಿ ಗೌರವಾಧ್ಯಕ್ಷ
(ಚಿತ್ರ / ವರದಿ 2017 : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.17: ಕಳೆದ ಶುಕ್ರವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ನಡೆದ ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಮುಂಬಯಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷ ಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ನೂತನ ಪದಾಧಿಕಾರಿಗಯಾದಿಯನ್ನು ಪ್ರಕಟಿಸಿದ್ದು ಅಧ್ಯಕ್ಷರಾಗಿ ಕಡಂದಲೆ ಸುರೇಶ್ ಎಸ್. ಭoಡಾರಿ ಮತ್ತು ಗೌರವಾಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು.
ಸತೀಶ್ ಶೆಟ್ಟಿ ಪಟ್ಲ
ಉಪಾಧ್ಯಕ್ಷರುಗಳಾಗಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಕೈರಬೆಟ್ಟು ವಿದ್ವಾನ್ ವಿಶ್ವನಾಥ್ ಭಟ್ ಮತ್ತು ಅಶೋಕ್ ಪಕ್ಕಳ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕರ್ನೂರು ಮೋಹನ್ ರೈ, ಜತೆ ಕಾರ್ಯದರ್ಶಿಯಾಗಿ ಅಜೆಕಾರು ಬಾಲಕೃಷ್ಣ ಶೆಟ್ಟಿ, ಗೌರವ ಕೋಶಾಧಿಕಾರಿಗಳಾಗಿ ಬಾಬು ಶೆಟ್ಟಿ ಪೆರಾರ ಮತ್ತು ಸಿಎ| ಸುರೇಂದ್ರ ಎಸ್.ಶೆಟ್ಟಿ ಅವರನ್ನು ನೇಮಿಸಲಾಯಿತು.
ಗೌರವ ಸಲಹೆಗಾರರುಗಳಾಗಿ ಪ್ರಭಾಕರ ಎಲ್. ಶೆಟ್ಟಿ, ನಿತ್ಯಾನಂದ ಡಿ. ಕೋಟ್ಯಾನ್, ಪದ್ಮನಾಭ ಎಸ್. ಪಯ್ಯಡೆ, ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ (ಕೆ.ಡಿ ಶೆಟ್ಟಿ), ಕರ್ನಿರೆ ವಿಶ್ವನಾಥ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಧನಂಜಯ ಸಿ.ಶೆಟ್ಟಿ ಜೂಹು, ಗೋಪಾಲ್ ಎಸ್. ಪುತ್ರನ್, ಡಾ| ಸುನೀತಾ ಎಂ.ಶೆಟ್ಟಿ, ರವೀಂದ್ರನಾಥ ಎಂ. ಭಂಡಾರಿ, ಮಹೇಶ್ ಎಸ್.ಶೆಟ್ಟಿ, ಮುಂಡ್ಕೂರು ರತ್ನಾಕರ ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ಪ್ರವೀಣ್ ಬಿ.ಶೆಟ್ಟಿ, ಐಕಳ ಗುಣಪಾಲ್ ಶೆಟ್ಟಿ, ಶಶಿಧರ ಶೆಟ್ಟಿ ವಸಾಯಿ, ವಿಜಯ ಎಂ. ಭಂಡಾರಿ, ರಾಜೀವ ಎಂ. ಭoಡಾರಿ, ಅರುಣೋದಯ ಎಸ್.ರೈ ವಿೂರಾರೋಡ್, ಸುಬ್ಬಯ್ಯ ಶೆಟ್ಟಿ ಕಲ್ಯಾಣ್, ಖಾಂದೇಶ್ ಭಾಸ್ಕರ್ ಶೆಟ್ಟಿ, ಭುಜಂಗ ಶೆಟ್ಟಿ ಸಯಾನ್, ಸಿಎ| ವಿಶ್ವನಾಥ ಶೆಟ್ಟಿ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಶಿವರಾಮ ಶೆಟ್ಟಿ ಅಜೆಕಾರು, ಸುಂದರ ಶೆಟ್ಟಿ ಡೊಂಬಿವಲಿ, ಡಾ| ಶಿವ ಎಂ.ಮೂಡಿಗೆರೆ, ಸುರೇಂದ್ರ ಕುಮಾರ್ ಹೆಗ್ಡೆ, ಇಂದ್ರಾಳಿ ದಿವಾಕರ ಶೆಟ್ಟಿ, ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ಪ್ರೇಮ್ ಶೆಟ್ಟಿ, ಮರಾಠ ಸುರೇಶ್ ಶೆಟ್ಟಿ, ವಾಮಯ್ಯ ಶೆಟ್ಟಿ ಚೆಂಬೂರು, ಚಂದ್ರಹಾಸ ರೈ ಬೊಳ್ನಾಡುಗುತ್ತು, ದಿವಾಕರ ಶೆಟ್ಟಿ ಕುರ್ಲಾ, ಭಾಸ್ಕರ್ ಶೆಟ್ಟಿ ಸಿಬಿಡಿ, ಮುನ್ನಾಲಾಯಿಗುತ್ತು ಸಚ್ಚಿದಾನಂದ ಎಂ.ಶೆಟ್ಟಿ, ವಿಶ್ವನಾಥ್ ಶೆಟ್ಟಿ ಕಲ್ಯಾಣ್, ಸುರೇಶ್ ಶೆಟ್ಟಿ ಯೆಯ್ಯಾಡಿ ಅವರನ್ನು ಹಾಗೂ ಸಂಚಾಲಕರುಗಳಾಗಿ ಐಕಳ ಗಣೇಶ್ ವಿ.ಶೆಟ್ಟಿ ಮತ್ತು ಅಶೋಕ್ ಶೆಟ್ಟಿ ಪೆರ್ಮುದೆ ಅವರನ್ನೇ ನೇಮಿಸಲಾಯಿತು. ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸುರೇಶ್ ಭಂಡಾರಿ, ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಉಪಸ್ಥಿತ ನಿರ್ಗಮನ ಹಾಗೂ ನೂತನ ಪದಾಧಿಕಾರಿಗಳಿಗೆ ಪುಷ್ಪಗುಪ್ಚಗಳನ್ನಿತ್ತು ಸತೀಶ್ ಪಟ್ಲ ಶುಭಾರೈಸಿದರು.
ಕಡಂದಲೆ ಸುರೇಶ್ ಎಸ್.ಭಂಡಾರಿ:
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಮತ್ತು ಅಧ್ಯಕ್ಷರಾಗಿರುವ ಕಡಂದಲೆ ಸುರೇಶ್ ಭಂಡಾರಿ ಅವರು ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕರಾಗಿ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷರಾಗಿ, ಭಂಡಾರಿ ಮಹಾ ಮಂಡಲ, ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ (ನೋ.) ಕಪ್‍ಪರೇಡ್ ಮುಂಬಯಿ ಇದರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಉದಾರ ದಾನಿ (ಫಿಲಾಂಥ್ರಾಪಿಸ್ಟ್), ಸಮಾಜ ಸೇವಕ, ಕೊಡುಗೈದಾನಿ ಆಗಿದ್ದಾರೆ. ಅಂತೆಯೇ ನಾಗೇಶ್ವರ ಸಿನಿ ಕಂಬೈನ್ಸ್‍ನ ರೂವಾರಿ ಆಗಿದ್ದು ತನ್ನ ನಿರ್ಮಾಪಕತ್ವದಲ್ಲಿ ತನ್ನ ಸುಪುತ್ರ ಯುವೋದ್ಯಮಿ, ಭಂಡಾರಿ ಸಮಾಜದ ಯುವ ನಾಯಕ, ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದ ಕಡಂದಲೆ ಸೌರಭ್ ಸುರೇಶ್ ಭಂಡಾರಿ ನಟನೆಯ `ಅಂಬರ್ ಕೇಟರರ್ಸ್' ತುಳು ಚಲನಚಿತ್ರದ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಹೊರನಾಡಿನಲ್ಲಿ ತುಳು-ಕನ್ನಡಿಗರು ಸಾಂಘಿಕವಾಗಿ ಕ್ರಿಯಶೀಲರಾಗಲು ಅವರು ಸಾಕಷ್ಟು ಪೆರೀತ್ಸಾಹ ನೀಡಿದ್ದಾರೆ. ನಿಷ್ಕಪಟ ಸ್ವಭಾವ, ತೇಜಪೂರ್ಣವಾದ ಕಣ್ಣುಗಳು, ಸಾಧಾರಣ ನಿಲುವಿನ ಮುಗ್ಧ ನಗೆಯ ಮೋಡಿಗಾರರಾಗಿರುವ ಅವರು ತುಳು-ಕನ್ನಡಿಗರೊಂದಿಗೆ, ವಿವಿಧ ಸಂಘಟನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟು ಕೊಂಡವರು. ಅವರ ಸಮಾಜ ಸೇವೆ, ಧಾರ್ಮಿಕ, ಸಾಂಸ್ಕøತಿಕ ಕೈಂಕರ್ಯಗಳಿಗೆ ಅವರನ್ನು ವಿವಿಧ ಸಂಸ್ಥೆಗಳು ಗೌರವಿಸಿವೆ. ಅವರ ಸಾಧಾನೆಗಳಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಮುಂಬಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಐಕಳ ಹರೀಶ್ ಶೆಟ್ಟಿ :
ಮಾಯನಗರಿಯ ಒಳಹೊರಗೆ ಸೇರಿದಂತೆ ದೇಶ-ವಿದೇಶಗಳಲ್ಲಿ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಮನೆಮಾತಾದ ದಕ್ಷ ಸಂಘಟಕ, ಕರ್ನಾಟಕ ರಾಜ್ಯೋತ್ಸವ ಪುರಸ್ಕøತ ಐಕಳ ಹರೀಶ್ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ತುಳು-ಕನ್ನಡಿಗರ ಉನ್ನತಿಯೊಂದಿಗೆ ಕನ್ನಡ ನಾಡು-ನುಡಿ-ಸಾಹಿತ್ಯ, ಸಂಸ್ಕøತಿ, ಕಲೆಯ ಬಲವರ್ಧನೆಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ. ಎಳೆಯ ಪ್ರಾಯದಿಂದಲೇ ಭಿನ್ನ ಭಿನ್ನ ಅನುಭವಗಳ ಪಾಕದಲ್ಲಿ ಗಟ್ಟಿಯಾಗುತ್ತ ನಡೆದು, ಪ್ರತಿಷ್ಠಿತ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾಗಿ ಸಂಘ ಮತ್ತು ಸಮಾಜಕ್ಕೆ ನೂತನ ಆಯಾಮವನ್ನು ನೀಡುವಲ್ಲಿ ಯಶಸ್ವಿಯಾದವರು.
ವಿದ್ಯಾಥಿರ್ ಜೀವನದಲ್ಲಿ ಯುವ ಸಂಘಟನೆಯ ಕುಶಲ ಕಾರ್ಯಕರ್ತರಾಗಿ ಮುಂದುವರಿದು ಬೌದ್ಧಿಕವಾಗಿ ಬೆಳೆಯುತ್ತ ಸಮರ್ಥ ಸಂಘಟಕರಾಗಿ ಇಂದು ತುಳು-ಕನ್ನಡಿಗರ ಮುಂದೆ ಕಾಣಿಸುತ್ತಿದ್ದಾರೆ. ಸಂಘಟನೆ ಹೇಗಿರಬೇಕು?, ಯಾವ ರೀತಿಯಲ್ಲಿ ಮುನ್ನಡೆಯಬೇಕು?, ನಾಯಕತ್ವದ ಲಕ್ಷಣಗಳೇನು? ಎಂಬುವುದನ್ನು ಐಕಳ ಹರೀಶ್ ಶೆಟ್ಟಿ ಅವರಿಂದ ಕಲಿಯಬೇಕು. ಪ್ರಗತಿಪರ ಚಿಂತಕರಾಗಿರುವ ಅವರು ಸದಾ ಹಸನ್ಮುಖಿ. ಅಲ್ಲದೆ ಸರಳ ಜೀವಿ, ಧಾರ್ಮಿಕ ಮನೋಭಾವದ ಶ್ರೀಮಂತ ವ್ಯಕ್ತಿತ್ವ. ತಮ್ಮ ಬದುಕಿನುದ್ದಕ್ಕೂ ಚಲನಶೀಲತೆಯನ್ನು ಕಾಯ್ದುಕೊಂಡು ಬಂದ ಅವರು ನಮ್ಮ ನಡುವಿನ ದೈತ್ಯ ಪ್ರತಿಭೆಯ ಸಂಘಟಕ, ತುಳು-ಕನ್ನಡಾಭಿಮಾನಿ. ತುಳು ಭಾಷೆಯೊಂದಿಗೆ, ಕನ್ನಡವನ್ನೂ, ಕನ್ನಡ ನಾಡನ್ನು, ಸಂಸ್ಕøತಿಯನ್ನು ಪ್ರೀತಿಸುತ್ತಾ ಬಂದವರು. ತಮ್ಮ ಕ್ರಿಯಾಶೀಲತೆಯಿಂದ ಬಂಟ ಸಮಾಜ ಮಾತ್ರವಲ್ಲದೆ ತುಳು-ಕನ್ನಡಿಗರ ಶಕ್ತಿ ಕೇಂದ್ರವಾಗಿ, ಶ್ರೀಮಂತ ಸಂಘಟಕರಾಗಿ ಎಲ್ಲೆಡೆ ಜನಪ್ರಿಯರಾಗಿದ್ದಾರೆ.
ತುಳು, ಕನ್ನಡ ಸಾಹಿತ್ಯ ಸಂಸ್ಕøತಿಯ ಕುರಿತು ವಿಶೇಷವಾದ ಆಸ್ಥೆಯನ್ನು ಹೊಂದಿರುವ ಅವರು, ಆಶಾವಾದಿ, ಇಚ್ಛಾವಾದಿ, ಶಿಸ್ತು ಪ್ರಿಯ ವ್ಯಕ್ತಿ. ಬಂಟರ ಸಂಘವನ್ನು ಮತ್ತು ಬಂಟ ಸಮಾಜವನ್ನು ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡಿಕೊಂಡು ಹೋರಾಟ ನಡೆಸಿ ಬದುಕಿನ ಪಥದಲ್ಲಿ ನಡೆದವರು. ಸಫಲತೆಗಳು ಒಂದರ ನಂತರ ಇನ್ನೊಂದು ಅವರನ್ನು ಹಿಂಬಾಲಿಸಿದವು. ಮುಂಬಯಿ ಸೇರಿದಂತೆ ಉಪ ನಗರಗಳಲ್ಲಿ ಬಂಟರ ಸಂಘದ ಒಂ`ತ್ತು ಪ್ರಾದೇಶಿಕ ಸಮಿತಿಗಳನ್ನು ಸ್ಥಾಪಿಸಿ ಅದರ ಮೂಲಕ ಸಂಘದ ಕಾರ್ಯಚಟುವಟಿಕೆಗಳು ಸಮಾಜ ಬಾಂ`ವರ ಮನೆ-ಮನಗಳನ್ನು ಮುಟ್ಟಿ, ಹೃದಯವನ್ನು ತಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ ಬಂಟ ಕಲೋತ್ಸವ, ವಿಶ್ವ ಬಂಟ ಕ್ರೀಡೋತ್ಸವ ಹೀಗೆ ಹತ್ತಾರು ಯಶಸ್ವಿ ಸಮಾರಂ`ಗಳನ್ನು ಆಯೋಜಿಸಿದ ಯಶಸ್ಸಿಗೆ ಪಾತ್ರರಾಗಿದ್ದಾರೆ.
ಐಕಳ ಹರೀಶ್ ಶೆಟ್ಟಿ ಅವರು ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವ ಹೊರನಾಡ, ಹೊರರಾಷ್ಟ್ರದ ತುಳು-ಕನ್ನಡಿಗರೊಂದಿಗೆ ಸಂಪರ್ಕವನ್ನಿಟ್ಟುಕೊಂಡವರು. ಹೊರನಾಡ ಕನ್ನಡ ಸಾಹಿತಿಗಳಿಗೆ, ಪ್ರತಿ`ಗಳಿಗೆ ಅವರು ಮುಂಬಯಿಯಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಐಕಳ ಹರೀಶ್ ಶೆಟ್ಟಿ ಬರೇ ಸಂಘಟಕರಷ್ಟೇ ಅಲ್ಲ. ಅವರೋರ್ವ ಉತ್ಕಟ ಕಲಾಭಿಮಾನಿ, ಸಾಹಿತ್ಯಾಭಿಮಾನಿ. ಕನ್ನಡ ಸಾಹಿತ್ಯ, ಕಲೆ, ಸಂಸ್ಕøತಿಯ ಆಳ-ಅಗಲ ವೈ`ವವನ್ನು ಅವರು ಅನುಭವಿಸಬಲ್ಲವರು. ಸುಂಸ್ಕøತರಾಗಿರುವ ಐಕಳ ಅವರು ಸಾಹಿತ್ಯ, ಸಂಗೀತ, ಕ್ರೀಡೆ, ಕಲೆಗಳ ನೈಜ ಆರಾಧಕರು. ಎಲ್ಲರೊಳಗೊಂದಾಗುವ ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುವ ಅವರು ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷರಾಗಿ ಹಲವಾರು ಸಂಘಟನೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅವರ ಸಿದ್ಧಿ-ಸಾಧನೆಗಳಿಗೆ ಹಲವಾರು ಪುರಸ್ಕಾರ, ಸಮ್ಮಾನಗಳು ಲಭಿಸಿವೆ. ಪ್ರಸ್ತುತ ಕಲೆ, ಕಲಾವಿದರ ಸಂಘಟನೆಯಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಗೌರವಾಧ್ಯಕ್ಷರಾಗಿ ಆಯ್ಕೆ ಗೊಂಡಿರುವುದು ಅಭಿನಂದನೀಯ.
ಎ. 14 ರಂದು ಸಂಜೆ ಕುರ್ಲಾ ಪೂರ್ವ ಬಂಟರ `ವನದ ಅನೆಕ್ಸ್ ಕಟ್ಟಡದ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸ`ಗೃಹದಲ್ಲಿ ಯಕ್ಷ`ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಸ್ಥಾಪಕಾ`ಯಕ್ಷ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ `ಗವತ, ಯಕ್ಷ ಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ಅವರ ಉಪಸ್ಥಿತಿಯಲ್ಲಿ ನಡೆದ ಸ`ಯಲ್ಲಿ ಮುಂಬಯಿ ಸಮಿತಿಯ ಪದಾಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.