ಮುಂಬಯಿ (ಮಂಗಳೂರು), ಮೇ.04: ಮುಂಬಯಿ ಅಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಚಿತ್ರ ನಿರ್ಮಾಪಕ, ಭಂಡಾರಿ ಮಹಾ ಮಂಡಲದ ಸಂಸ್ಥಾಪಕಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಬೋಮರಮನೆ ಸುರೇಶ್ ಎಸ್. ಭಂಡಾರಿ ಮತ್ತು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ದಂಪತಿ ಸುಪುತ್ರ ಚಲನಚಿತ್ರ ನಟ, ಯುವೋದ್ಯಮಿ ಚಿ| ಸೌರಭ್ ಸುರೇಶ್ ಭಂಡಾರಿ ಇವರ ವಿವಾಹವು ಇಂದಿಲ್ಲಿ ಗುರುವಾರ ಮಂಗಳೂರು ಅಲ್ಲಿನ ಉದ್ಯಮಿ ಕೂಳೂರು ಮಾಧವ ಭಂಡಾರಿ ಮತ್ತು ಸುಜತಾ ಎಂ. ಭಂಡಾರಿ ಚಿ| ಸೌ| ಮೇಘ ಭಂಡಾರಿ ಇವರೊಂದಿಗೆ ಮೂಡಬಿದ್ರಿ ಇಲ್ಲಿನ ಶ್ರೀ ನುಡಿಸಿರಿ ಕಲಾ ವೇದಿಕೆಯಲ್ಲಿ ನೆರವೇರಿತು.