ಮುಂಬಯಿ, ಮಾ.03: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಾಮ ನಿರ್ದೇಶನ ಸದಸ್ಯರಾಗಿ ಕಡಂದಲೆ ಸುರೇಶ್ ಎಸ್.ಭಂಡಾರಿ ನೇಮಕ ಗೊಂಡಿದ್ದಾರೆ. ಕರ್ನಾಟಕ ಸರಕಾರದ ನಿರ್ದೇಶನದ ಮೇರೆಗೆ ನಾಮ ನಿರ್ದೇಶನ ಸದಸ್ಯರನ್ನು ತುಳು ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ನೇಮಕ ಗೊಳಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ತಿಳಿಸಿದ್ದಾರೆ.

 

ಮುಂಬಯಿಯಲ್ಲಿನ ತುಳು-ಕನ್ನಡಿಗರ ರಾಯಭಾರಿ ಎಂದೇ ಹೆಸರಾಂತ ಕಡಂದಲೆ ಸುರೇಶ್ ಭಂಡಾರಿ ಅವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯರಾಗಿದ್ದು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ, ಅಧ್ಯಕ್ಷರಾಗಿ, ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷರಾಗಿರುವರು. ಮನಿಫೋಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕರಾಗಿ, ಅನಘಾ ಇಂಟರ್‍ನೇಶನಲ್ ಸಂಸ್ಥೆಯ ಮಾಲೀಕರು. ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ (ನೋ.) ಕಪ್‍ಪರೇಡ್ ಮುಂಬಯಿ ಇದರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ನಾಗೇಶ್ವರ ಸಿನಿ ಕ್ರಿಯೇಷನ್ಸ್‍ನ ಆಡಳಿತ ನಿರ್ದೇಶಕ, ಚಲನಚಿತ್ರ ನಿಮಾಪಕ, ಉದಾರ ದಾನಿ, ಸಮಾಜ ಸೇವಕರೆಣಿಸಿ ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತದ ನೂರಾರು ತುಳು-ಕನ್ನಡ ಸಂಘಸಂಸ್ಥೆಗಳ ಪೋಷಕರಗಿಯೂ ಶ್ರಮಿಸುತ್ತಿದ್ದಾರೆ. 

Latest News

Copyright © 2016 - www.kadandalesureshbhandary.com. Powered by eCreators

Home | About Us | NewsSitemap | Contact