ಯಕ್ಷಗಾನ ಕಲಾವಿದರನ್ನು ಗುರುತಿಸುವ ಅಗತ್ಯವಿದೆ : ಸತೀಶ್ ಪಟ್ಲ
(ಚಿತ್ರ / ವರದಿ 2017 : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.14: ನಾನು ನಿಮ್ಮ ಪ್ರತಿಯೋರ್ವ ಕಲಾಭಿಮಾನಿಗಳ ಮನೆಯ ಮಗು ಇದದಂತೆ. ನನ್ನ ಕಲಾಸೇವೆಯನ್ನು ನಿಮ್ಮೆಲ್ಲರ ಮನೆಗಳಲ್ಲಿ ಬೆಳಗಿಸಿ ಪೆರೀತ್ಸಾಹಿಸಬೇಕು. ನಮ್ಮ ಸಂಸ್ಥೆಯು ಯಕ್ಷಗಾನ ಕಲಾವಿದರಿಗೆ ಈ ತನಕ ರೂಪಾಯಿ 50 ಲಕ್ಷಗಳಿಗೂ ಅಧಿಕ ಮೊತ್ತದ ಸಹಾಯ ನಿಧಿಯನ್ನಿತ್ತು ಸ್ಪಂದಿಸಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಭವಿಷ್ಯದಲ್ಲಿ ಹಿರಿಯ ಕಲಾವಿದರಿಗೆ ಮಾಸಿಕ ವೇತನ, ಯಕ್ಷಗಾನ ಕಲಾವಿದರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯ ಅಡಿಯಲ್ಲಿ 100 ಮನೆಗಳನ್ನು ನಿರ್ಮಿಸುವ ಇತ್ಯಾದಿ ಯೋಜನೆಗಳು ನಮ್ಮಲ್ಲಿದ್ದು, ಇಂತಹ ಮಹಾಕಾರ್ಯಕ್ಕೆ ಕಲಾಭಿಮಾನಿಗಳ ಸಹಯೋಗ ಅವಶ್ಯಕವಿದೆ. ಯಾರೊಬ್ಬರಿಗೂ ದೇಣಿಗೆ ಸಹಯೋಗದಲ್ಲಿ ಭಾರವಾಗದಂತೆ ನೋಡಿಕೊಳ್ಳುತ್ತಾ ಕಲಾಕ್ಷೇತ್ರದಲ್ಲಿ ಬದಲಾವಣೆ ತರುವ ಪ್ರಯತ್ನದತ್ತ ಈ ಸಂಸ್ಥೆ ಕಾರ್ಯನಿರತವಾಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷ ಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ತಿಳಿಸಿದರು.
ಇಂದಿಲ್ಲಿ ಶುಕ್ರವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿ ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಯಕ್ಷಧ್ರುವ ಟ್ರಸ್ಟ್‍ನ ಮುಂಬಯಿ ಸಮಿತಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾದ ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಮುಂಬಯಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆ ನಡೆಸಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರನ್ನು ನೇಮಿಸಿ ಸುರೇಶ್ ಭಂಡಾರಿ ಮತ್ತು ಉಪಸ್ಥಿತ ಸರ್ವ ನಿರ್ಗಮನ ಹಾಗೂ ನೂತನ ಪದಾಧಿಕಾರಿಗಳಿಗೆ ಪುಷ್ಪಗುಪ್ಚಗಳನ್ನಿತ್ತು ಸತೀಶ್ ಪಟ್ಲ ಶುಭಾರೈಸಿದರು.
ಸತೀಶ್ ಪಟ್ಲ ಯಕ್ಷಗಾನದ ಮೇರು ಕಲಾವಿದ. ಭವಿಷ್ಯತ್ತಿನ ಪೀಳಿಗೆಗೆ ಅನುಅಕರಣೀಯರಾದ ಯುವ ಕಲಾವಿದ. ಇವರಲ್ಲಿ ದೂರದೃಷ್ಟಿತ್ವವಿದ್ದು ಕಲಾರಾಧನೆಯನ್ನು ಜೀವನವನ್ನಾಗಿಸಿರುವರು. ಇವರ ಸಾರಥ್ಯದ ಈ ಸಂಸ್ಥೆ ನಿಂತ ನೀರು ಆಗಾದೆ ಹರಿಯುವ ನದಿಯಂತೆ ವಿಶ್ವದಾದ್ಯಂತ ಈ ಸಂಸ್ಥೆ ಪಸರಲಿ ಎಂದ ನಿರ್ಗಮನಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ತಿಳಿಸಿದರು.
ನೂತನ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಮಾತನಾಡಿ ಇಂದು ದೇಶ-ವಿದೇಶಗಳಲ್ಲಿ ಬಂಟ ಸಮಾಜದವರು ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸಾಧನೆಯನ್ನು ಕಂಡಾಗ ಆಶ್ಚರ್ಯವಾಗುತ್ತಿದೆ. ಇಂದು ವಿಶ್ವ ಬಂಟ ದಿನಾಚರಣೆಯ ಸಂದರ್ಭದಲ್ಲಿ ನಮ್ಮೆಲ್ಲರ ಪ್ರೀತಿಯ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಅವರು ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ನನಗೆ ನೀಡಿರುವುದಕ್ಕೆ ಅಭಾರಿಯಾಗಿದ್ದೇನೆ. ಇದು ಸತೀಶ್ ಪಟ್ಲ ಅವರೊಬ್ಬರ ಸಂಸ್ಥೆಯಲ್ಲ. ನಾವೆಲ್ಲರು ಒಂದಾಗಿ ಈ ಸಂಸ್ಥೆಯನ್ನು ಮುಂದುವರಿಸಬೇಕು. ಓರ್ವ ಕಲಾವಿದರಾಗಿ, ಕಲಾವಿದರ ಕ್ಷೇಮಕ್ಕಾಗಿ ಸಂಸ್ಥೆಯನ್ನು ಸ್ಥಾಪಿಸಿರುವುದು ಅಭಿಮಾನಪಡುವ ವಿಷಯವಾಗಿದೆ. ಫೌಂಡೇಷನ್‍ನ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ. ಈ ಸಂಸ್ಥೆಯಲ್ಲಿ ನನಗೆ ಕಾರ್ಯನಿರ್ವಹಿಸಲು ಹೆಮ್ಮೆಯಾಗುತ್ತಿದೆ. ನಿಮ್ಮೆಲ್ಲರ ಸಹಕಾರ, ಪೆರೀತ್ಸಾಹದಿಂದ ಮುಂಬಯಿ ಸಮಿತಿಯನ್ನು ಇನ್ನಷ್ಟು ಬಲಿಷ್ಟಗೊಳಿಸೋಣ ಎಂದರು.
ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರ ಬಗ್ಗೆ ಹೊಂದಿರುವ ಕಾಳಜಿಯನ್ನು ಕಂಡಾಗ ಮನತುಂಬಿ ಬಂತು. ಇಂದು ಫೌಂಡೇಷನ್ ಮುಖಾಂತರ ಸಾವಿರಾರು ಕಲಾವಿದರಿಗೆ ಆಸರೆಯಾಗಿ ನಿಂತಿರುವ ಅವರ ಈ ಮಹಾನ್ ಕಾರ್ಯಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ. ಮುಂಬಯಿ ಸಮಿತಿಯು ಇನ್ನಷ್ಟು ಬಲಿಷ್ಟಗೊಂಡು ಅವರ ಆಶಯಗಳನ್ನು ಪೂರೈಸುವಲ್ಲಿ ಶ್ರಮಿಸಬೇಕು. ಪಟ್ಲ ಸತೀಶ್ ಶೆಟ್ಟಿ ಅವರು ಫೌಂಡೇಷನ್ ಮುಖಾಂತರ ಈಗಾಗಲೇ ಲಕ್ಷಾಂತರ ರೂ. ಗಳನ್ನು ಕಲಾವಿದರ ನೆರವಿಗಾಗಿ ಬಳಸಿದ್ದಾರೆ. ಈ ಹೃದಯವಂತಿಕೆ ಎಲ್ಲರಲ್ಲೂ ಇರುವುದಿಲ್ಲ. ಭವಿಷ್ಯದ ಅವರ ಎಲ್ಲಾ ಕಾರ್ಯಯೋಜನೆಗಳಿಗೆ ಮುಂಬಯಿ ಸಮಿತಿಯ ಪೂರ್ಣ ಸಹಕಾರವಿದೆ ಎಂದು ಐಕಳ ಹರೀಶ್ ಶೆಟ್ಟಿ ಮಾತನಾಡಿ ಎಂದರು.
ಫೌಂಡೇಶನ್‍ನ ಮುಂಬಯಿ ಸಮಿತಿ ಉಪಾಧ್ಯಕ್ಷರುಗಳಾದ ಐಕಳ ಗಣೇಶ್ ವಿ.ಶೆಟ್ಟಿ ಮತ್ತು ಅಶೋಕ್ ಶೆಟ್ಟಿ ಪೆರ್ಮುದೆ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ ಮತ್ತು ಕೇಂದ್ರೀಯ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ವೇದಿಕೆಯಲ್ಲಿ ಅಸೀನರಾಗಿದ್ದರು.
ಸಭೆಯಲ್ಲಿ ಫೌಂಡೇಶನ್‍ನ ಮುಂಬಯಿ ಸಮಿತಿಯ ದಿವಾಕರ್ ಶೆಟ್ಟಿ ಇಂದ್ರಾಳಿ, ರಂವೀಂದ್ರನಾಥ ಎಂ.ಭಂಡಾರಿ, ಐಕಳ ಗುಣಪಾಲ್ ಶೆಟ್ಟಿ, ಪ್ರಕಾಶ್ ಟಿ.ಶೆಟ್ಟಿ ನಲ್ಯಗುತ್ತು, ವಸಂತ ಶೆಟ್ಟಿ ಪಲಿಮಾರು, ಅಜೆಕಾರು ಬಾಲಕೃಷ್ಣ ಶೆಟ್ಟಿ, ಕೊಲ್ಯಾರು ರಾಜು ಶೆಟ್ಟಿ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಪೇಟೆಮನೆ ಪ್ರಕಾಶ್ ಶೆಟ್ಟಿ, ಬಾಬು ಎಸ್.ಶೆಟ್ಟಿ ಪೆರಾರ, ಖಾಂದೇಶ್ ಭಾಸ್ಕರ್ ಶೆಟ್ಟಿ, ದಯಾಸಾಗರ್‍ಚೌಟ, ಎಕ್ಕಾರು ದಯಾಮಣಿ ಸುಧಾಕರ್ ಶೆಟ್ಟಿ, ದೆಪ್ಪಣಿಗುತ್ತು ಚಂದ್ರಹಾಸ ಶೆಟ್ಟಿ, ಶಂಕರ್‍ಗುರು ಸ್ವಾಮಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಲತಾ ಪ್ರಭಾಕರ್ ಶೆಟ್ಟಿ, ಕರ್ನೂರು ಮೋಹನ್ ರೈ, ಮುಂಡ್ಕೂರು ರತ್ನಾಕರ ಶೆಟ್ಟಿ, ಕುಂಠಿನಿ ಪ್ರಕಾಶ್ ಶೆಟ್ಟಿ, ಅಶೋಕ್ ಶೆಟ್ಟಿ ಕಾಪು ಸೇರಿದಂತೆ ಹಲವು ಕಲಾವಿದರು, ಕಲಾ ಸಂಘಟಕರು ಹಾಜರಿದ್ದರು.