(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.09: ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ನಿರ್ಮಿತ ತೌಳವ ಸೂಪರ್‍ಸ್ಟಾರ್ ಬಿರುದಾಂಕಿತ ಸೌರಭ್ ಸುರೇಶ್ ಭಂಡಾರಿ ನಾಯಕನಟನಾಗಿ ಅಭಿನಯಿಸಿ ಕರ್ನಾಟಕದ ಕರಾವಳಿಯಾದ್ಯಂತ ಜನಮನ್ನಣೆ ಪಡೆದ `ಅಂಬರ್ ಕ್ಯಾಟರರ್ಸ್' ತುಳು ಸಿನೆಮಾದ ಮುಂಬಯಿಯಲ್ಲಿನ 19ನೇ ಪ್ರದರ್ಶನ ಇಂದಿಲ್ಲಿ ಸೋಮವಾರ ರಾತ್ರಿ ಘಾಟ್‍ಕೋಪರ್‍ನ ಆರ್‍ಮಾಲ್‍ನ ಇನೋಕ್ಸ್ ಸಿನೆಮಾ ಮಂದಿರದಲ್ಲಿ ಯಶಸ್ವಿಯಾಗಿ ತೆರೆಕಂಡಿತು. ನಿರೀಕ್ಷೆಗೂ ವಿೂರಿದ ಸಿನೆಮಾಭಿಮಾನಿಗಳ ಆಗಮನದಿಂದ ತುಂಬಿ ತುಳುಕಿದ ಸಿನೆಮಾಗೃಹದಲ್ಲಿ ತುಳು ಸಿನೆಮಾದ ಸವಿಯನ್ನುನ್ನಿಸಿದ `ಅಂಬರ್ ಕ್ಯಾಟರರ್ಸ್' ಯಶಸ್ವಿಯಾಗಿ ತೆರೆಕಂಡಿತು.
ಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ ದೀಪ ಪ್ರಜ್ವಲಿಸಿ ಇಂದಿನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೋಂಬೆ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಅಡ್ವಕೇಟ್ ಸುಭಾಷ್ ಬಿ.ಶೆಟ್ಟಿ, ಉದ್ಯಮಿಗಳಾದ ಆನಂದ್ ಶೆಟ್ಟಿ (ಆರ್ಗನಿಕ್ ಕೆಮಿಕಲ್), ಸತೀಶ್ ಶೆಟ್ಟಿ (ರಿಬ್ಬನ್ & ಬಲೂನ್ಸ್ ), ಪದ್ಮನಾಭ ಪೂಂಜಾ (ಅವಿಷ್ಕಾರ್), ಕೊನಾಲ್ಡ್ ಬ್ಯಾಪ್ಠಿಸ್ಟ್, ಬಾಲಕೃಷ್ಣ ಭಂಡಾರಿ, ವಿಶ್ವನಾಥ ಶೆಟ್ಟಿ (ಭಾರತ್ ಕೆಫೆ, ಘಾಟ್‍ಕೋಪರ್), ಜಿತೇಂದ್ರ ಶೆಟ್ಟಿ (ಆಕರ್ಷಣ್ ವಿಕ್ರೋಲಿ), ನಾರಾಯಣ ಶೆಟ್ಟಿ ನಂದಳಿಕೆ, ವಿಜಯ ಆರ್. ಭಂಡಾರಿ, ಗಣೇಶ್ ಶೆಟ್ಟಿ (ಎಸ್‍ಸಿಒ ವಿಕ್ರೋಲಿ), ಯುಗಾನಂದ್ ಶೆಟ್ಟಿ, ಐಕಳ ವಿಶ್ವನಾಥ ವಿ.ಶೆಟ್ಟಿ, ಕರುಣಾಕರ್ ಶೆಟ್ಟಿ (ಯೂಕೇ ಇಂಡಸ್ಟ್ರೀಸ್), ಮನೋಹರ್ ಶೆಟ್ಟಿ ನಂದಳಿಕೆ, ಶೋಭಾ ಸುರೇಶ್ ಭಂಡಾರಿ, ಮೇಘಾ ಸೌರಬ್ ಸೇರಿದಂತೆ ಅನೆÉೀಕ ಗಣ್ಯರು ಉಪಸ್ಥಿತರಿದ್ದು ಸುರೇಶ್ ಭಂಡಾರಿ ಮತ್ತು ಸೌರಭ್ ಭಂಡಾರಿ ಸಾಧನೆಗೆ ಶುಭಾರೈಸಿದರು.
ಮುಂಬಯಿಯಲ್ಲಿನ ಅಪ್ರತಿಮ ಕಲಾವಿದ ಸೌರಭ್ ಭಂಡಾರಿ ನಟನೆಯ ಈ ತುಳು ಸಿನೇಮಾ ಇದೀಗ ನಿರೀಕ್ಷೆಕ್ಕಿಂತಲೂ ಅಧಿಕ ಸಿನೆಮಾಪ್ರಿಯರ ಮನಸೆಳೆಯುತ್ತಿರುವುದು ಅತೀವ ಸಂತಸತಂದಿದೆ. ಇದೊಂದು ಒಳ್ಳೆಯ ಮತ್ತು ವೀಕ್ಷಕರ ಆಶಯಕ್ಕೂ ವಿೂರಿ ನಿರ್ಮಾಣಗೊಂಡಂತಿದೆ. ತನ್ನ ನಟನೆಯ ಅದೂ ನಾಯಕ ನಟನಾಗಿ ನಟಿಸಿದ ಪ್ರಪ್ರಥಮ ತುಳು ಸಿನೆಮಾ ಅತ್ಯಾದ್ಭುತವಾಗಿ ಮೂಡಿದೆ. ನೂರಾರು ಸಿನೆಮಾಗಳಲ್ಲಿ ನಟಿಸಿದ ಅಪಾರ ಅನುಭವಿ ನಟನಿಂದ ನಿರ್ಮಿತ ಚಿತ್ರದಂತೆ ಭಾಸವಾಗುತ್ತಿದೆ. ಮೊದಲ ಚಿತ್ರದಲ್ಲೇ ಇದಕ್ಕಿಂತ ಮಿಗಿಲಾದ ನಟನೆ ನಿರೀಕ್ಷಿಸಲಾಗದು. ಬಹುಶಃ ಮೇರುನಟನಂತೆ ಕಾಣಿಸಿಕೊಂಡ ಸೌರಭ್‍ಗೆ ಮುಂದೆಯೂ ಬಾಲಿವುಡ್‍ನಲ್ಲೂ ಅತ್ಯುತ್ತಮವಾದ ಭವಿಷ್ಯವಿದೆ ಎಂದು ಈ ಚಲನಚಿತ್ರದಿಂದ ತಿಳಿಯ ಬಹುದು ಎಂದು ನೆರೆದ ಕಲಾಭಿಮಾನಿಗಳು ಅಭಿಪ್ರಾಯ ಪಟ್ಟರು.
ಸೌರಭ್ ಸುರೇಶ್ ಭಂಡಾರಿ ಸ್ವಾಗತಿಸಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.