ಜೀವನಕ್ಕೆ ಹಾಸ್ಯ ಪ್ರಮುಖವಾದದ್ದು : ಡಾ| ಪ್ರಭಾಕರ ಭಟ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮಂಗಳೂರು, ನ.23, 2017: ಕರಾವಳಿ ಜನತೆ ಕಳೆದೊಂದು ವರ್ಷದಿಂದ ಕಾತರದಿಂದ ನಿರೀಕ್ಷಿಸುತ್ತಿರುವ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನ (ಬ್ಯಾನರ್)ನಲ್ಲಿ ಸಿದ್ಧಗೊಳಿಸಿದ ಹಾಸ್ಯ ರಸಪ್ರಧಾನ `ಅಂಬರ್ ಕ್ಯಾಟರರ್ಸ್' ತುಳು ಸಿನೆಮಾ ಇಂದು ಸಂಜೆ ಮಂಗಳೂರುನ ಸಿಟಿ ಸೆಂಟರ್ ನಲ್ಲಿರುವ ಸಿನಿಪೊಲಿಸ್ ಚಿತ್ರಮಂದಿರದಲ್ಲಿ ನೂರಾರು ಗಣ್ಯರ ಸಮ್ಮುಖದಲ್ಲಿ ಅಗ್ರೇಸರ ಪ್ರದರ್ಶನ (ಪ್ರೀಮಿಯರ್ ಶೋ) ಮೂಲಕ ತೆರೆಯನ್ನೇರಿತು.

 

 

 

 

 

ಆರ್‍ಎಸ್‍ಎಸ್ ಮುಖಂಡ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ದೀಪ ಪ್ರಜ್ವಲಿಸಿ `ಅಂಬರ್ ಕ್ಯಾಟರರ್ಸ್' ತುಳು ಸಿನೆಮಾಕ್ಕೆ ಚಾಲನೆಯನ್ನಿತ್ತರು. ಅತಿಥಿಗಳಾಗಿ ಕನ್ನಡಿಗರ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ, ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಚಿತ್ರನಟ ಶರತ್ ಲೋಹಿತಾಶ್ವ, ಸಿನಿಪೊಲಿಸ್ ಸಿಇಒ ಕೀರ್ತನ್ ಶೆಟ್ಟಿ, ಮಾಜಿ ಸಚಿವ ಕೆ.ಅಮರನಾಥ್ ಶೆಟ್ಟಿ, ಯು ಮುಂಬಾ ಪ್ರೊಕಬಡ್ಡಿ ತಂಡದ ರವಿ ಶೆಟ್ಟಿ, ಜಿತೇಶ್ ಶಿರೋಡ್ಕರ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಡಾ| ಪ್ರಭಾಕರ್ ಭಟ್ ಮಾತನಾಡಿ ಮೊದಲ ಸಿನೆಮಾ ಮೂಲಕವೇ ಸೂಪರ್‍ಸ್ಟಾರ್ ಹೆಗ್ಗಳಿಕೆಗೆ ಪಾತ್ರನಾದ ಸೌರಭ್ ಭಂಡಾರಿ ಓರ್ವ ಪ್ರಬುದ್ಧ ಕಲಾವಿದನೆಂದು `ಅಂಬರ್ ಕ್ಯಾಟರರ್ಸ್' ಮೂಲಕ ತೋರ್ಪಡಿಸಿದ್ದಾರೆ. ಅವರ ಅಪ್ಪನ ಆಸೆ ಈ ಮೂಲಕ ಈಡೇರಿಸಿದ್ದಾರೆ ಎನ್ನುವ ಆಶಯ ನಮ್ಮದಾಗಿದೆ. ಇಂತಹ ಚಿತ್ರಗಳಿಂದ ಮಾತೃಭಾಷೆಯ ಉಳಿವು ಸಾಧ್ಯ. ಭಾಷಾ ಉಳಿವಿನಿಂದ ಸಂಸ್ಕೃತಿ ಉಳಿಯುವುದು. ಜಗತ್ತಿನ ಎಲ್ಲೆಲ್ಲೂ ನೆಲೆಯಾದ ಜನರು ತಮ್ಮತಮ್ಮ ಮಾತೃಭಾಷೆಯ ಉಳಿವಿಗಾಗಿ ಶ್ರಮಿಸುತ್ತಾರೆ. ಕಾರಣ ಭಾಷೆ ಜನಾಂಗದ ಮುನ್ನಡೆಗೆ ಪೂರಕವಾಗಿದೆ. ನಮ್ಮನಮ್ಮ ಭಾಷೆಯೊಟ್ಟಿಗೆ ನಾವು ಮುನ್ನಡೆದಾದ ನಮ್ಮ ಜೀವನ ಸಾರ್ಥಕವಾಗುವುದು. ಸಿನೆಮಾವನ್ನು ನೋಡುವುದು ಕೇಳುವ ಪ್ರಕ್ರಿಯೆ ಆದ ಕಾರಣ ಇಲ್ಲಿ ಭಾಷಾ ಭವ್ಯತೆ ಪರಿಣಾಮಕಾರಿ ಆಗುತ್ತದೆ. ಆದುದರಿಂದ ಚಲನಚಿತ್ರದಿಂದ ಮುಂದಿನ ಜನಾಂಗಕ್ಕೆ ಭಾಷೆ ಸಂಸ್ಕೃತಿ ಉಳಿಸಲು ಸಾಧ್ಯ. ಕಲಾವಿದರ ಮನರಂಜನೆಯಿಂದ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ. ಜೀವನದಲ್ಲಿ ಹಾಸ್ಯ ಪ್ರಮುಖವಾದದ್ದು. ಹಾಸ್ಯ ಸನ್ನಿವೇಶದಿಂದ ಶೀಘ್ರಗತಿಯಲ್ಲಿ ಸಂಸ್ಕೃತಿ ಬೆಳೆಯುವುದು ಎನ್ನುತ್ತಾ ಈ ಚಿತ್ರಕ್ಕೆ ಶುಭಾರೈಸಿದರು.

 

 

 

 

 

ಸುಮಾರು ಎರಡು ಕೋಟಿ ವ್ಯಯಿಸಿ ತುಳುಚಿತ್ರ ರಂಗದಲ್ಲೇ ಅತೀ ಆಡಂಬರದ ಹಾಸ್ಯಚಿತ್ರವನ್ನಾಗಿ ರೂಪಿಸಿದ ಸುರೇಶ್ ಭಂಡಾರಿ ಅವರ ಸಾಧನೆ ಮೆಚ್ಚುಗೆಯದ್ದು. ಈ ಚಿತ್ರ ಚೆನ್ನಾಗಿ ಮೂರು ಬಾರಿಕ್ಕಿಂತ ನೂರು ಬಾರಿ ನೋಡಿ ಕನಿಷ್ಠ ನೂರಾರು ದಿನ ಪ್ರದರ್ಶನ ಕಾಣಬೇಕು. ಅವಾಗಲೇ ಚಿತ್ರತಂಡದ ಶ್ರಮ, ಸಾಧನೆ ಫಲಭರಿತವಾಗುವುದು. ಈ ಚಿತ್ರ ತುಳುನಾಡಿನ ಹೊರಗೂ ಪ್ರಭಾವ ಬೀರಲಿ. ಇದರಿಂದ ತುಳು ಭಾಷೆಯ ಬೆಳವಣಿಗೆಯಾಗಲಿ. ಆ ಮೂಲಕ ಭಂಡಾರಿ ಚಿತ್ರ ಪರಿವಾರದ ಸಾಧನೆ ಮನಮನೆಗಳಲ್ಲಿ ನೆಲೆಯಾಗಲಿ ಎಂದು ಪಾಲೆತ್ತಾಡಿ ಆಶಯ ವ್ಯಕ್ತ ಪಡಿಸಿದರು.

ಊರಿನ ಪ್ರೇಮವುಳ್ಳವರಿಂದ ಮಾತ್ರ ಇಂತಹ ಸಾಧನೆ ಸಾಧ್ಯ ಎಂದು ಅಮರನಾಥ ಶೆಟ್ಟಿ ಅಭಿಪ್ರಾಯಪಟ್ಟರು.

ಎ.ಸಿ ಭಂಡಾರಿ ಮಾತನಾಡಿ ಮಾತೃಭಾಷೆಯಿಂದ ಜೀವನಕ್ಕೆ ಭವ್ಯತೆ ಸಾಧ್ಯ. ಇದಕ್ಕೆ ಪೂರಕವಾಗಿ ಈ ಚಿತ್ರ ಮೂಡಿದೆ. ಇಂತಹ ಸಿನೆಮಾಗಳಿಂದ ತುಳು ಭಾಷೆಯ ಅಭಿವೃದ್ಧಿ ಆಗಲಿ ಎಂದರು.

ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಕೋರಿದರು. ನಟ ನವೀನ್ ಡಿ.ಪಡೀಲ್ ಚಿತ್ರ ನಿರ್ಮಾಣದ ಬಗ್ಗೆ ಹಾಸ್ಯಮಯವಾಗಿ ಪ್ರಸ್ತಾಪಿಸಿದರು. ಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ ಸುಖಾಗಮನ ಕೋರುತ್ತಾ ಚಿತ್ರದ ಯಶಸ್ಸಿಗೆ ಪ್ರೋತ್ಸಹಿಸುವಂತೆ ತಿಳಿಸಿದರು. ನಾಯಕನಟ ಸೌರಭ್ ಸುರೇಶ್ ಭಂಡಾರಿ ಅತಿಥಿಗಳನ್ನು ಗೌರವಿಸಿದರು.

 

 

 

 

 

ಶಿವಾ'ಸ್ ಸ್ಟೈಲೋ ಡಿಝಯ್ನರ್ಸ್‍ನ ಕಾರ್ಯಾಧ್ಯಕ್ಷ ಶಿವರಾಮ ಕೆ.ಭಂಡಾರಿ, ಜಿ.ಜಿ ಪಾಲ್, ಜಗದೀಶ್ ಅಧಿಕಾರಿ, ಶೋಭಾ ಸುರೇಶ್ ಭಂಡಾರಿ, ಮಾಧವ ಕೂಳೂರು, ಮೇಘಾ ಸೌರಭ್ ಭಂಡಾರಿ, ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಬಾಲಕೃಷ್ಣ ಪಿ.ಭಂಡಾರಿ, ನ್ಯಾ| ಶೇಖರ್ ಎಸ್.ಭಂಡಾರಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಭಂಡಾರಿ, ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಕಾರ್ಕಳ ಶೇಖರ ಭಂಡಾರಿ, ವಿಜಯಕುಮಾರ್ ಕೋಡಿಯಾಲ್‍ಬೈಲ್, ಕೂಳೂರು ಮಾಧವ ಭಂಡಾರಿ, ಸುಜತಾ ಮಾಧವ ಭಂಡಾರಿ, ದಿನೇಶ್ ಭಂಡಾರಿ ಬಂಟ್ವಾಳ, ಪ್ರೇಮ್‍ಶೆಟ್ಟಿ ಸುರತ್ಕಲ್, ಲ| ಕಿಶೋರ್ ಡಿ.ಶೆಟ್ಟಿ, ಕೆ.ಧನರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸಾಯಿ ಕೃಷ್ಣ, ಸುನೀಲ್ ಭಟ್, ಅರುಣ್ ಕುಮಾರ್ (ಏರ್ ಇಂಡಿಯಾ) ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿತ್ರವನ್ನು ವೀಕ್ಷಿಸಿ ಬಾರೀ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡವನ್ನು ಅಭಿನಂದಿಸಿ ಚಿತ್ರದ ಯಶಸ್ಸಿಗೆ ಶುಭಾರೈಸಿದರು.

ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಜಯಪ್ರಸಾದ್ ಬಜಾಲ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ನಾಯಕಿನಟಿ ಸಿಂಧು ಲೋಕನಾಥ್, ಇತರ ಅಭಿನೇತರರು ಉಪಸ್ಥಿತರಿದ್ದರು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿದರು. ಬಂಟರವಾಣಿ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಕು. ವಿ.ಜೆ ಚೈತ್ರ ಅಂಚನ್ ಧನ್ಯವದಿಸಿದರು.

ಸೀಮಿತ ಟಾಕೀಸ್, ಸೀಮಿತ ಮಾರುಕಟ್ಟೆ, ಸೀಮಿತ ವೀಕ್ಷಕರು ಆದುದರಿಂದ ತುಳು ಚಿತ್ರಗಳು ಕೂಡ ಸೀಮಿತ ಬಜೇಟ್‍ನಲ್ಲಿಯೇ ನಿರ್ಮಾಣ ಆಗುತ್ತಿದ್ದರೂ, ಬಜೆಟ್ ಕಾರಣದಿಂದಾಗಿ ಬೇರೆ ಭಾಷೆಯಲ್ಲಿ ಕಾಣುವ ಅದ್ಧೂರಿತನ ಇಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎನ್ನುವ ಕೊರತೆ ನೀಗಿಸಿ ಈ ಚಿತ್ರ ರಚಿಸಿದ್ದೇವೆ. ತನ್ನ ಪುತ್ರ ಸೌರಭ್ ಸುರೇಶ್ ಭಂಡಾರಿಯನ್ನೇ ನಾಯಕ ನಟನಾಗಿ ಪರಿಚಯಿಸಿ `ಅಂಬರ್ ಕ್ಯಾಟರರ್ಸ್' ತುಳು ಸಿನೆಮಾ ತುಳು ಮಾತೆಗೆ ಗೌರವಪೂರ್ವಕವಾಗಿ ಅರಿಸುತ್ತಿದ್ದೇನೆ. ಇಂದು (ನ.24) ಶುಕ್ರವಾರ ಅವಿಭಜಿತ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣುವ ಚಿತ್ರವನ್ನು ನಾಡಿನ ಸಮಸ್ತ ಜನತೆ ವೀಕ್ಷಿಸಿ `ಅಂಬರ್ ಕ್ಯಾಟರರ್ಸ್'ನ ಸವಿಯನ್ನು ಂಡು ಪ್ರಸನ್ನರಾಗುವಂತೆ ಸುರೇಶ್ ಎಸ್.ಭಂಡಾರಿ ತಿಳಿಸಿದ್ದಾರೆ.

 

 

 

 

 

 

 

 

 

 

 

 

 

 

 

Latest News

Copyright © 2016 - www.kadandalesureshbhandary.com. Powered by eCreators

Home | About Us | NewsSitemap | Contact