ಮುಂಬಯಿ, ಜ.31, 2018: ಮಹಾನಗರ ಮುಂಬಯಿಯಾದದ್ಯಾಂತ ನೆಲೆಯಾಗಿರುವ ಕರಾವಳಿ ಜನತೆ ಕಳೆದೊಂದು ವರ್ಷದಿಂದ ಕಾತರದಿಂದ ನಿರೀಕ್ಷಿಸುತ್ತಿರುವ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನ (ಬ್ಯಾನರ್)ನಲ್ಲಿ ಸಿದ್ಧಗೊಂಡು ಅವಿಭಜಿತ ಜಿಲ್ಲೆಯಾದಾದ್ಯಂತ ತೆರೆಕಂಡು ಸಿಪ್ರೇಮಿಗಳ ಮನಗೆದ್ದು ನಿರಂತರ ಐವತ್ತಕ್ಕೂ ಅಧಿಕ ದಿನಗಳಿಂದ ಪ್ರದರ್ಶಿಸಲ್ಪಡುವ ತುಳು ಹಾಸ್ಯ ರಸಪ್ರಧಾನ `ಅಂಬರ್ ಕ್ಯಾಟರರ್ಸ್' ಸಿನೆಮಾ ಇದೀಗ ಮುಂಬಯಿ ಸಿನೆಮಾ ಮಂದಿರಗಳಲ್ಲಿ ತೆರೆಕಾಣಲು ಸಿದ್ಧಗೊಂಡಿದೆ.

 

 

 

ಇದೇ ಫೆ.04ರ ಭಾನುವಾರ ಬೆಳಿಗ್ಗೆ 9.15 ಗಂಟೆಗೆ ಉಪನಗರ ಥಾಣೆ ಪೂರ್ವದ ಆನಂದ್ ಟಾಕೀಸ್‍ನಲ್ಲಿ ಪ್ರಥಮ ಪ್ರದರ್ಶನ ತೆರೆಕಾಣಲಿದೆ ಎಂದು ತೌಳವ ಸೂಪರ್‍ಸ್ಟಾರ್ ಬಿರುದಾಂಕಿತ ಚಿತ್ರದ ನಾಯಕನಟ ಸೌರಭ್ ಸುರೇಶ್ ಭಂಡಾರಿ ತಿಳಿಸಿದ್ದಾರೆ.

ಫೆ.11ರ ಭಾನುವಾರ ಬೆಳಿಗ್ಗೆ 9.15 ಗಂಟೆಗೆ ಉಪನಗರ ಥಾಣೆ ಪೂರ್ವದ ಆನಂದ್ ಟಾಕೀಸ್‍ನಲ್ಲಿ ಹಾಗೂ ಬೆಳಿಗ್ಗೆ 9.15 ಗಂಟೆಗೆ ತಿಲಕ್ ಟಾಕೀಸ್ ಡೊಂಬಿವಿಲಿ ಪೂರ್ವ ಮತ್ತು ಬೆಳಿಗ್ಗೆ 9.15 ಗಂಟೆಗೆ ಮೆಹುಲ್ ಟಾಕೀಸ್ ಮುಲುಂಡ್ ಪಶ್ಚಿಮ ಇಲ್ಲಿ ಪ್ರದರ್ಶಿಸಲ್ಪಡಲಿದೆ. ಈ ಚಿತ್ರವನ್ನು ಬೃಹನ್ಮುಂಬಯಿಯಲ್ಲಿನ ಲಕ್ಷಾಂತರ ಜನತೆ ವೀಕ್ಷಿಸುತ್ತಾ sನೂರಾರು ದಿನಗಳಲ್ಲಿ ಪ್ರದರ್ಶನ ಕಾಣುವಂತಾಗಬೇಕು. ಕೋಸ್ಟಲ್‍ವುಡ್ ರಂಗದ ಜನಪ್ರಿಯ, ಸರ್ವೋತ್ಕೃಷ್ಟ ಚಿತ್ರವಾಗಿ ಮೂಡುತ್ತಾ ಸಮಗ್ರ ಜನರ ಮನಮನೆಗಳಲ್ಲಿ ಕಂಗೋಲಿಸುವಂತಾಗಬೇಕು. ಆವಾಗಲೇ ಮುಂದಿನ ಸಿನೆಮಾ ನಿರ್ಮಾಣಕ್ಕೆ ಪ್ರೋತ್ಸಹ ಲಭಿಸುವಂತಾಗುವುದು ಎಂದು ಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದ್ದಾರೆ.

`ಅಂಬರ್ ಕ್ಯಾಟರರ್ಸ್' ತುಳು ಸಿನೆಮಾ ಮೂಲಕ ಚಲನಚಿತ್ರಕ್ಕೆ ತನ್ನ ಸುಪುತ್ರ, ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದ ಸೌರಭ್ ಭಂಡಾರಿ ಅವರನ್ನು ಪರಿಚಯಿಸಿರುವೆ. ತಾವೆಲ್ಲರೂ ಅತಾಧಿಕ ಸಂಖ್ಯೆಯಲ್ಲಿ ಈ ಚಿತ್ರವನ್ನು ಸವಿದು ಸೌರಭ್‍ನಿಗೂ ಸಿನೆಮಾರಂಗದಲ್ಲಿ ಭವ್ಯ ಭವಿಷ್ಯ ಹಾರೈಸುವ ಆಶಯ ನನ್ನದಾಗಿದೆ ಎಂದೂ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದ್ದಾರೆ.

 

Latest News

Copyright © 2016 - www.kadandalesureshbhandary.com. Powered by eCreators

Home | About Us | NewsSitemap | Contact