ಸೇವೆ ಸಮಗ್ರ ಸಮಾಜಕ್ಕೆ ಸಲ್ಲಬೇಕು: ಸಂತೋಷ್ ಶೆಟ್ಟಿ ಪನ್ವೇಲ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.24, 2017: ನಾವೆಲ್ಲರೂ ತುಳುನಾಡ ದೈವದೇವರ ಪುಣ್ಯಭೂಮಿಯ ಮಣ್ಣಿನ ಜನರಾಗಿದ್ದು, ಇಲ್ಲಿ ಉದರ ಪೋಷಣೆ ನಿಮಿತ್ತ ಉದ್ಯೋಗವನ್ನರಸಿ ಮಹಾರಾಷ್ಟ್ರದಾದ್ಯಂತ ನೆಲೆಯಾದವರು. ಆದರೆ ಬಂಡಾರಿ ಸಮುದಾಯವು ತಮ್ಮ ಕಸಬನ್ನು ವೃತ್ತಿಜೀವನದೊಂದಿಗೆ ರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಿ ಮೆರೆದವರು ಎನ್ನುವುದೇ ತಮ್ಮ ಸಮುದಾಯದ ವೈಶಿಷ್ಟ್ಯ. ಇಂದಿನ ದಿನಗಳಲ್ಲಿ ಸೌರಭ್ ಭಂಡಾರಿಯನ್ನು ಪರಿಚಯಿಸಿ ಮತ್ತೊಂದು ಸಾಧಕ ನಟನನ್ನು ಗುರುತಿಸಿದ್ದು ಸಮಾಜದ ಗೌರವ ಹೆಚ್ಚಿಸಿದೆ. ತುಳು ಚಿತ್ರರಂಗ ಸುಲಭವಲ್ಲ, ಇದಕ್ಕೆ ಕಡಂದಲೆ ಸುರೇಶ್ ಭಂಡಾರಿ ಅವರು ಹೆಜ್ಜೆಯನ್ನಿರಿಸಿದ್ದೇ ಬಹುದೊಡ್ಡ ಸಾಧನೆ. ಸಮಾಜ ಸೇವೆಯನ್ನು ಬರೇ ಸ್ವಸಮಾಜಕ್ಕೆ ಮೀಸಲಿಡಬಾರದು. ಸೇವೆ ಅನ್ನುವುದು ಸಮಗ್ರ ಸಮಾಜಕ್ಕೆ ಸಲ್ಲಬೇಕು. ಜೊತೆಗೆ ಸಮಾಜೋದ್ಧಾರಕ್ಕಾಗಿ ಶಿಕ್ಷಣಕ್ಕೆ ಪ್ರೋತ್ಸಾಹ ಅವಶ್ಯ ಎಂದು ಪನ್ವೇಲ್ ನಗರ ಪೌರಸಭೆಯ ನಗರ ಸೇವಕ ಸಂತೋಷ್ ಜಿ.ಶೆಟ್ಟಿ ನುಡಿದರು.

 

 

 

 

 

ಘಾಟ್ಕೋಪರ್ ಪೂರ್ವದ ಝವೇರಿಬೆನ್ ಪೋಪಟ್‍ಲಾಲ್ ಸಭಾಗೃಹದಲ್ಲಿ ಇಂದಿಲ್ಲಿ ಆದಿತ್ಯವಾರ ಬೃಹನ್ಮು ಂಬಯಿ ಅಲ್ಲಿನ ಭಂಡಾರಿ ಸೇವಾ ಸಮಿತಿ ಸಂಭ್ರಮಿಸಿದ 2017ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದು ಸಮಾರಂಭವನ್ನು ಉದ್ಘಾಟಿಸಿ ಸಂತೋಷ್ ಶೆಟ್ಟಿ ಮಾತನಾಡಿದರು.

ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿದ ಅದ್ದೂರಿ ವಾರ್ಷಿಕೋತ್ಸವದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಕಚ್ಚೂರು ಶ್ರೀನಾಗೇಶ್ವರ ಸೇವಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಎಂ.ಭಂಡಾರಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ನಿತ್ಯಾನಂದ ಕೋಟ್ಯಾನ್ ಮಾತನಾಡಿ ಭಂಡಾರಿ ಸಮಾಜದಲ್ಲಿ ಬಹಳಷ್ಟು ವಕೀಲರಿದ್ದಾರೆ. ಆದುದರಿಂದಲೇ ಕಾನೂನು ಬದ್ಧತೆಗೆ ಮಾದರಿ ಆಗಿದ್ದಾರೋ ಏನೋ..? ಕಲಾಸೇವೆಗೂ ಭಂಡಾರಿ ಬಂಧುಗಳ ಕೊಡುಗೆ ಬಹಳಷ್ಟಿದೆದೆ. ಕೌಟುಂಬಿಕ ವಾತಾವರಣದ ಉದ್ದೇಶವಿರಿಸಿ ಆಯೋಜಿಸುವ ಇಂತಹ ಉತ್ಸವಗಳು ಒಗ್ಗಟ್ಟನ್ನು ಕ್ರೋಢಿಕರಿಸಬಲ್ಲದು. ಸಂಘಟನೆಯಲ್ಲಿ ಬಲಯುತರಾಗಿ ಮುನ್ನಡೆದರೆ ಹಿರಿಯರ ಕನಸು ನನಸಾಗುವುದು ಭವಿಷ್ಯತ್ತಿನ ಪೀಳಿಗೆಗೆ ಸಮಾಜ ವರದಾನವಾಗುವುದು ಎಂದರು.

 

 

 

 

 

ನಮ್ಮ ಸಮಾಜ ಚಿಕ್ಕದಾದರೂ ಕಾರ್ಯಚಟುವಟಿಕೆಗಳಿಂದ ದೊಡ್ಡದಾಗಿ ತೋರುತ್ತಿದೆ. ಸುರೇಶ್ ಭಂಡಾರಿ ಅವರ ನೇತೃತ್ವದ ಬಳಿಕ ಹೊಸ ಹೊಸ ಯೋಜನೆಗಳು ಮೂಡಿ ಯುವಜನಾಂಗ ಸಮುದಾಯದ ಜೊತೆಗೆ ಬೆಸೆಯುತ್ತಿದ್ದಾರೆ. ಬಂಧುಗಳ ಒಗ್ಗೂಡುವಿಕೆಯ ಪ್ರೋತ್ಸಾಹವೇ ಸಮುದಾಯಕ್ಕೆ ದೊಡ್ಡ ಬೆಂಬಲ ಎಂದು ಸದಾಶಿವ ಭಂಡಾರಿ ತಿಳಿಸಿದರು.

ಸೋಮಶೇಖರ್ ಭಂಡಾರಿ ಮಾತನಾಡಿ 22 ವರ್ಷ ಈ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಾಹಿಸಿದ್ದೇನೆ. 15 ವರ್ಷದ ಬಳಿಕ ಮತ್ತೆ ಈ ಸಂಘದ ವೇದಿಕೆಯನ್ನು ಅಲಂಕಾರಿಸುತ್ತಿರುವುದಕ್ಕೆ ಹಿರಿಯ ಮುತ್ಸದ್ಧಿಗಳ ಸಹಯೋಗ ಕಾರಣ. ಮನೆಮನೆಗಳಿಗೆ ಹೋಗಿ ಸದಸ್ಯರನ್ನು ಒಗ್ಗೂಡಿಸುತ್ತಿದ್ದ ಸಂಕಷ್ಟದ ಕಾಲ ಅದಾಗಿತ್ತು. ಇಂದು ಮೊಬೈಲ್ ಮೂಲಕವವೂ ಜನರ ಮನವನಗಳನ್ನು ಕ್ಷಣಾರ್ಧದಲ್ಲಿ ತಲುಪುವ ಕಾಲ. ಇದರಿಂದ ಪರಿವರ್ತನೆ ಸುಲಭ ಸಾಧ್ಯವಾಗಿದೆ. ನಾನು ಎಂದರೆ ಸಮಾಜ ಎಂದೂ ನಡೆಯದು, ನಾವೂ ಎಂದಾಗ ಎಲ್ಲವೂ ಸುಲಭ ಸಾಧ್ಯವಾಗುವುದು. ನಮ್ಮಲ್ಲಿಂದು ಹಿರೋ ಒಬ್ಬರು ತಾರಾಂಗಣದಲ್ಲಿ ಮೆರೆಯಿತ್ತುರುವುದು ಅಭಿನಂದನೀಯ ಎಂದರು.

ಸುರೇಶ್ ಭಂಡಾರಿ ಮಾತನಾಡಿ ನಮ್ಮ ಏಕತೆಯನ್ನು ಸೇವೆ ಮತ್ತು ಒಗ್ಗಟ್ಟಿನ ಮುಖೇನ ಪ್ರದರ್ಶಿಸಬೇಕು. ಸಮಾಜಮುಖಿ ಭೂಮಿಕೆಗೆ ಬಾರದೆ ತೆರೆಮರೆಯಲ್ಲಿದ್ದು ಸಲಹಿ ಟೀಕೆಗಳನ್ನು ಮಾಡುವುದರಿಂದ ಯಾರೂ ಏನೂ ಸಾಧಿಸಲಾರರು. ಸ್ವಸಮುದಾಯದ ಸರ್ವೋನ್ನತಿ ನಮ್ಮತನ ಮತ್ತು ಸ್ವಭಿಮಾನದಿಂದ ಮಾತ್ರ ಸಾಧ್ಯ. ಬರುವ ಮೇ 4-9ರ ದಿನಗಳಲ್ಲಿ ಬಾರ್ಕೂರುನಲ್ಲಿ ನಡೆಯುವ ಭಂಡಾರಿ ಉತ್ಸಹದಲ್ಲಿ ಸ್ವಪ್ರೇರಿತರಾಗಿ ಪಾಲ್ಗೊಂಡು ಶ್ರೀ ಕಚ್ಚೂರು ನಾಗೇಶ್ವರ ದೇವರ ಕೃಪೆಗೆ ಪಾತ್ರರಾಗಿರಿ. ಈ ಹಿಂದೆಯೂ ಮುಂಬಯಿ ಭಂಡಾರಿಗಳ ಸಹಯೋಗ ಲಭಿಸಿದ್ದು ಮುಂದೆಯೂ ಅಧಿಕ ಸಂಖ್ಯೆಯಲ್ಲಿ ಸಹಕರಿಸುವ ಭರವಸೆ ನಮಗಿದೆ ಎಂದು ಆಶಯ ವ್ಯಕ್ತಪಡಿಸಿದರು.

 

 

 

 

 

ಎಂದು ಅಧ್ಯಕ್ಷೀಯ ಭಾಷಣದಲ್ಲಿ ಸಮಾಜದ ಮೇಲಿನ ಅಭಿಮಾನವೇ ನಮ್ಮನ್ನು ಸಂಘಟಿಸಲು ಸಾಧ್ಯ. ಸೇವಾಭಿಮಾನ ಇಲ್ಲದವರಿಂದ ಏನೂ ಅಪೇಕ್ಷಿಸಲು ಆಗದು. ಕುಲದೇವರಾದ ಶ್ರೀ ಕಚ್ಚೂರು ನಾಗೇಶ್ವರ ದೇವರು ಎಲ್ಲರನ್ನೂ ಹರಸಲಿ. ಬಾರ್ಕೂರುನಲ್ಲಿ ನಡೆಯುವ ಅವರ ಸೇವೆಯಲ್ಲಿ ಮುಂಬಯಿ ನೆಲೆಯಾದ ಸರ್ವ ಭಂಡಾರಿ ಬಂಧುಗಳು ಪಾಲ್ಗೊಂಡು ಉತ್ಸವವನ್ನು ಯಶಸ್ಸು ಗೊಳಿಸೋಣ ಎಂದು ನ್ಯಾ| ಶೇಖರ್ ಭಂಡಾರಿ ಕರೆಯಿತ್ತರು.

ಸಂಸ್ಥೆಯ ಉಪಾಧ್ಯಕ್ಷ ನ್ಯಾ| ರಾಮಣ್ಣ ಎಂ.ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ, ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ರುಕ್ಮಯ ಭಂಡಾರಿ ಮತ್ತು ಸುಜತಾ ಆರ್.ಭಂಡಾರಿ ಅವರನ್ನು ಸನ್ಮಾನಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಭಂಡಾರಿ ಸಮಾಜದ ಸ್ಟಾರ್‍ನಟ, ಅಂಬರ್ ಕ್ಯಾಟರರ್ಸ್ ಚಲನಚಿತ್ರದ ನಾಯಕನಟ ಸೌರಭ್ ಎಸ್.ಭಂಡಾರಿ, ಸಕ್ರೀಯ ಕಾರ್ಯಕರ್ತ ರಮಾನಂದ ಭಂಡಾರಿ, ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ ಆಗಿದ್ದು ಕಾನೂನು ಪದವಿ ಉತ್ತೀರ್ಣ ನ್ಯಾ| ಕೋಶಾಧಿಕಾರಿ ಕು| ಕ್ಷಮಾ ಆರ್.ಭಂಡಾರಿ ಅವರನ್ನು ಸತ್ಕರಿಸಿ ಅಭಿನಂದಿಸಿದರು. ವಿದ್ಯಾರ್ಥಿ ವೇತನದ ಪ್ರಾಯೋಜಕರಲ್ಲೋರ್ವರಾಗಿದ್ದು ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಪುತ್ತೂರು (ಪುಣೆ), ಪೊಲ್ಯ ಲಕ್ಷಿ ್ಮೀನಾರಾಯಣ ಶೆಟ್ಟಿ, ಜಯಶೀಲ ಯು.ಭಂಡಾರಿ, ಲತಾ ಬಂಡಾರಿ ಥಾಣೆ, ಸಂಗೀತ ಎಸ್.ಭಂಡಾರಿ, ಶ್ರೀನಿವಾಸ ಆರ್.ಕರ್ಕೇರ, ಅಶೋಕ್ ಸಸಿಹಿತ್ಲು ಅವರನ್ನು ಅಧ್ಯಕ್ಷರು ಗೌರವಿಸಿದರು.

 

 

 

 

 

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ, ಜೊತೆ ಖಜಾಂಜಿ ಪ್ರಕಾಶ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೇಶವ ಭಂಡಾರಿ, ನಾರಾಯಣ ಭಂಡಾರಿ, ರಾಕೇಶ್ ಭಂಡಾರಿ, ರಮೇಶ್ ಭಂಡಾರಿ, ವಿಶ್ವನಾಥ ಭಂಡಾರಿ, ಕರುಣಾಕರ ಭಂಡಾರಿ, ಮಹಿಳಾ ಉಪ ಕಾರ್ಯಾಧ್ಯಕ್ಷೆ ಅನುಶ್ರೀ ಶಿವರಾಮ ಭಂಡಾರಿ, ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಲಿತಾ ವಿ.ಭಂಡಾರಿ, ಶಾಲಿನಿ ರಮೇಶ್ ಭಂಡಾರಿ, ಗುಲಾಬಿ ಕೃಷ್ಣ ಭಂಡಾರಿ, ಡಾ| ಶಿವರಾಮ ಕೆ.ಭಂಡಾರಿ ಸೇರಿದಂತೆ ನೂರಾರು ಭಂಡಾರಿ ಬಾಂಧವರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಸರಿತಾ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಶಾಲಿನಿ ಭಂಡಾರಿ ಪ್ರಾರ್ಥನೆಯನ್ನಾಡಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಂಘದ ಜೊತೆ ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ.ಭಂಡಾ ರಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ ಸ್ವಾಗತಿಸಿ ವಂದಿಸಿದರು.

ಬೆಳಿಗ್ಗೆ ಸಂಸ್ಥೆಯ ಪದಾಧಿಕಾರಿಗಳನ್ನು ಒಳಗೊಂಡು ಕುಲದೇವರಾದ ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಆರತಿಗೈದು ದಿನಪೂರ್ತಿಯಾಗಿ ಜರುಗಿಸಲ್ಪಟ್ಟ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷ ಶೇಖರ್ ಎಸ್.ಭಂಡಾರಿ ದೀಪ ಹಚ್ಚಿದರು. ಬಳಿಕ ಸಂಸ್ಥೆಯ ಸದಸ್ಯರು, ಮಹಿಳೆಯರು, ಮಕ್ಕಳು ಸಾಂಸ್ಕೃತಿಕ ವೈಭವ ಪ್ರಸ್ತುತ ಪಡಿಸಿದರು ಹಾಗೂ ಸಮುದಾಯದ ಅಪ್ರತಿಮ ಕಲಾವಿದ ಜಯಶೀಲ ಉಮೇಶ್ ಭಂಡಾರಿ ಮತ್ತು ತಂಡವು ಡೊಂಬ ಯೋಗ ಹಾಗೂ `ತೆಲಿಕೆ ನಲಿಕೆ' ಹಾಸ್ಯ ಪ್ರಹಸನ ಮತ್ತು ಘಾಟ್ಕೋಪರ್ ಅಸಲ್ಫಾ ಅಲ್ಲಿನ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಲಾವಿದರುಗಳು `ಗಧಾ ಯುದ್ಧ' ಕನ್ನಡ ಯಕ್ಷಗಾನ ಪ್ರದರ್ಶಿಸಿದರು.

 

 

 

 

 

 

 

Latest News

Copyright © 2016 - www.kadandalesureshbhandary.com. Powered by eCreators

Home | About Us | NewsSitemap | Contact