ಸಾತ್‍ರಸ್ತಾ ಪ್ರಸಿದ್ಧ ಸರ್ವ ಧರ್ಮ ಪಾಲಕ ದೈವಕ್ಯ ಶ್ರೀ ನಿರಂಜನ ಸ್ವಾಮಿಜಿಗೆ
ಭಕ್ತಾಭಿಮಾನಿ ಶಿಷ್ಯ ವೃಂದದಿಂದ ಭಕ್ತಿಪೂರ್ವಕ ಗುರುವಂದನೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.10, 2017: ಮಹಾನಗರದ ಮಹಾಲಕ್ಷ್ಮೀ ಇಲ್ಲಿನ ಸಾತ್‍ರಸ್ತಾ ಜಾಕೋಬ್ ಸರ್ಕಲ್ ಇಲ್ಲಿನ ಹಾಗೂ ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ದೈವಕ್ಯ ಶ್ರೀ ಶ್ರೀ ನಿರಂಜನ ಸ್ವಾಮಿ ಅವರಿಗೆ ಇಂದಿಲ್ಲಿ ಭಾನುವಾರ ಗುರುಪೂರ್ಣಿಮೆಯ ಶುಭಾವಸರದಲ್ಲಿ ನೆರೆದ ಅಪಾರ ಸಂಖ್ಯೆಯ ಭಕ್ತ ಶಿಷ್ಯವೃಂದವು ಗುರುವಂದನೆ ಸಲ್ಲಿಸಿದರು.
ಆ ಮುನ್ನ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಿಗೆ ಪೂಜೆಯನ್ನು ನೆರವೇರಿಸಿ ಬಳಿಕ ದೈವಕ್ಯ ಶ್ರೀ ನಿರಂಜನ ಸ್ವಾಮಿಜಿ ಅವರ ಅಲಂಕೃತ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಗುರುವಂದನೆ ಸಲ್ಲಿಸಿದರು.
ಮೇ,2015ರಲ್ಲಿ ಸ್ವರ್ಗಸ್ಥ ಶ್ರೀ ನಿರಂಜನ ಸ್ವಾಮೀಜಿ ನಮ್ಮನ್ನಗಲಿದರೂ ಅವರು ಅಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿ ಕೊಳ್ಳುತ್ತಾ ಆ ದಿನಗಳಲ್ಲೇ ಪವಾಡ ಪುರುಷರಾಗಿದ್ದರು. ಶರೀರಿಕವಾಗಿ ಕಣ್ಮರೆಯಾದ ಮಾತ್ರಕ್ಕೆ ನಾವು ಗುರುಗಳನ್ನು ಕಳೆದುಕೊಳ್ಳಲಾರೆವು. ಅವರೋರ್ವ ಶ್ರೀ ಅನ್ನಪೂರ್ಣೇಶ್ವರಿ ಮಾತೆಯ ರೂಪದ ಶಕ್ತಿಯಾಗಿ ಲೋಕ ಹಿತದ ಕರ್ಮಯೋಗಿ ಎಣಿಸಿದ್ದರು. ಮಹಾ ಅತಿಮಾನವತಾ ಶಕ್ತಿ, ದೈವ ಭಕ್ತಿಯ ಪವಿತ್ರ ಪಥದಲ್ಲಿ ಸಾಗಿ ವಿದ್ಯಾದಾತ, ಅನ್ನದಾತ, ಸರ್ವಧರ್ಮ ಪಾಲಕ, ಯಕ್ಷಗಾನ ಪೆÇೀಷಕ, ಶಿಕ್ಷಣಪ್ರೇಮಿ ಎಂದೆಣಿಸಿ ನಮ್ಮಂತಹ ಶಿಷ್ಯವೃಂದಕ್ಕೆ ಗುರುವರ್ಯರಾಗಿದ್ದರು. ಶ್ರೀ ನಾರಾಯಣ ಗುರುಗಳ ತತ್ವಗಳನ್ನು ಅನುಸರಿಸಿ ಬಾಳುತ್ತಿದ್ದ ಸ್ವಾಮೀಜಿ ಭಕ್ತ ಜನತೆಯಲ್ಲಿ ಯಾವುದೇ ಜಾತಿಮತ ಧರ್ಮಕ್ಕಿಂತ ಮನವೀಯ ಧರ್ಮಕ್ಕೆ ಮಹತ್ವವಿತ್ತು ಸಲಹಿ ನಿಜವಾದ ಭಾರತೀಯ ಸಂಸ್ಕೃತಿಯ ಪರಿಪಾಕಲರಾಗಿದ್ದರು. ಸರ್ವ ಧರ್ಮ ಪಾಲಕರಾಗಿದ್ದ ಸ್ವಾಮೀಜಿ ಸರ್ವ ಧರ್ಮೀಯರನ್ನೂ ಗೌರವದಿಂದ ಕಾಣುತ್ತಿದ್ದರು. ಇಂತಹ ಧೀಮಂತ ಚೇತನವು ನಮ್ಮೆಲ್ಲರ ಪಾಲಿಗೆ ಸದಾ ಗುರುಗಲೇ ಆಗಿರುವರು ಎಂದು ಉಪಸ್ಥಿತ ಉಡುಪಿ ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷ, ಭಂಡಾರಿ ಮಹಾ ಮಂಡಲದ ಪೂರ್ವಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ ಭಟ್ ಪಾದುಕಾ ಪೂಜೆ, ಮಹಾ ಆರತಿ ನೆರವೇರಿಸಿ ಉಪಸ್ಥಿತ ಭಕ್ತಾಭಿಮಾನಿ ವೃಂದಕ್ಕೆ ಅನುಗ್ರಹಿಸಿದ್ದು ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ ಕೆ.ಟಿ ಕುಂದರ್, ದೇವಸ್ಥಾನ ಸಮಿತಿಯ ನಾರಾಯಣ ಎನ್.ಪೂಜಾರಿ, ಮಹೇಶ್ ಎನ್.ಪೂಜಾರಿ, ಸುಮಿತ್ರಾ ಎಂ.ಪೂಜಾರಿ, ಉಮೇಶ್ ಪೂಜಾರಿ, ಸೇವಾಕರ್ತರಾದ ಶ್ರೀಧರ ಪೂಜಾರಿ, ಅನೀಲ್ ಪೂಜಾರಿ ಮತ್ತಿತರರು ಹಾಜರಿದ್ದು ವಿಶೇಷ ಪೂಜೆ ನೆರವೇರಿಸಿ ಶ್ರೀಗಳನ್ನು ನಮಿಸಿದರು.