ಕಡಂದಲೆ ಸುರೇಶ್ ಸಂಜೀವ ಭಂಡಾರಿ ಇವರು ಅವಿಭಜಿತ ದಕ್ಷಿಣ ಕನ್ನಡದ ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬಜಗೋಳಿ ಬೋಮರ ಮನೆತನದ ಶ್ರೀ ಸಂಜೀವ ಭಂಡಾರಿ ಮತ್ತು ಕಡಂದಲೆ ರತ್ನಾ ಭಂಡಾರಿ ದಂಪತಿಗಳ ಸುಪುತ್ರರಾಗಿ 1961ನೇ ಜನವರಿ19ರಂದು ಜನಿಸಿದರು. ಸ್ಥಳೀಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಾರ್ಕಳದಲ್ಲಿ ಬೋರ್ಡ್ ಹೈಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಬದುಕು ಸವೆಯಲು 1981ರಲ್ಲಿ ಉದರ ಪೆÇೀಷಣೆಗಾಗಿ ಮುಂಬಯಿ ಸೇರಿ ಬದುಕು ರೂಪಿಸಿ ಸದ್ಯ ಯಜಮಾನನಾಗಿ ಮೆರೆದ ಸರಳ ಸಜ್ಜನಿಕೆಯ ಸೇವಾ ಸರದಾರರಾಗಿದ್ದಾರೆ. ಶ್ರದ್ಧೆಯಿಂದ ದುಡಿಮೆ ಮಾಡಿ, ಉದ್ಯಮಿಯಾಗಿ ನಾಡಿಗೆ ಚಿರಪರಿಚಿತ ಇವರು ಕಾಯಕದ ಶ್ರದ್ಧೆ ಮೂಲಕವೇ ತಮ್ಮನ್ನು ಎತ್ತರಕ್ಕೆ ಬೆಳೆದ ಮಹಾದಾನಿಯಾಗಿದ್ದು ಮುಂಬಯಿಯಲ್ಲಿನ ತುಳು-ಕನ್ನಡಿಗರ ರಾಯಭಾರಿ ಎಂದೇ ಜನಜನಿತರು.
ಶಿಕ್ಷಣ ಪೂರೈಸಿ, ಬಡತನದ ಬದುಕನ್ನು ಅಭವಿಸುವುದರಿಂದ ಹೊಟ್ಟೆ ಪಾಡನ್ನು ಹರಸಿ ಕರ್ನಾಟಕ ರಾಜ್ಯದ ಕರಾವಳಿ ತೀರದ ತುಳುನಾಡು ಊರಿಂದ ಉದ್ಯೋಗ ನಿಮಿತ್ತ ಮುಂಬಯಿ ಸೇರಿದ ಸುರೇಶ್ ಭಂಡಾರಿ ಬಲಗೈಯಿಂದ ಕೊಟ್ಟದ್ದು ಎಡಗೈಯೂ ತಿಳಿಯದಂತೆ ಮನಪೂರ್ವಕವಾಗಿ ನೀಡಿದ ದೇಣಿಗೆ ಅಷ್ಟಿಷ್ಟಲ್ಲ.
ಊರಿನಿಂದ ಹೊಟ್ಟೆಪಾದನ್ನು ಹರಸಿ ದೂರದ ಮುಂಬಯಿ ಸೇರಿದ ಭಂಡಾರಿ ಎಲ್ಲರಂತೆ ಹೊಟೇಲು ಕೆಲಸ ಮಾಡುತ್ತಲೇ ಹೆಚ್ಚುವರಿ ವಿದ್ಯಾಭ್ಯಾಸದ ಅರಿವು ಮೈಗೂಡಿಸಿದರು. ಬಾಲ್ಯ ದಿನಗಳಲ್ಲೇ ಕಷ್ಟದ ಜೀವನದ ನೋವುಂಡ ಇವರಲ್ಲಿ ಬಡತನದ ತುಡಿತ ಇದ್ದು ನಿಸ್ವಾರ್ಥತನ, ಪ್ರಾಮಾಣಿಕತೆ, ಅಚಲವಾದ ನಿರ್ಧಾರ, ಪರಿಶ್ರಮ ಮನೋಭಾವ ಅವರನ್ನೊಬ್ಬ ಯಶಸ್ವಿ ಉದ್ಯಮಿಯಾಗಿ ರೂಪಿಸುವಲ್ಲಿ ಯಶಕಂಡಿದೆ.
ಹಗಲಿರುಳು ಶ್ರಮಿಸಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡ ಸುರೇಶರು ತನ್ನ ಸ್ವಸಾಮಥ್ರ್ಯ ಮತ್ತು ಕಠಿಣ ಪರಿಶ್ರಮದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಾ ಆ ಮೂಲಕ ನೂರಾರು ಮಂದಿಗೆ ಉದ್ಯೋಗವಕಾಶ ಒದಗಿಸುತ್ತಾ ಸಂಸ್ಥೆಯನ್ನೂ ಆಥಿರ್üಕ ಪ್ರಗತಿಯತ್ತ ಕೊಂಡೊಯ್ದು ಸದ್ಯ ರಾಷ್ಟ್ರದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಯಶಸ್ವಿ ಮತ್ತು ಪ್ರತಿಷ್ಠಿತ ಉದ್ಯಮಿಯಾಗಿ, ಕೊಡುಗೈದಾನಿ, ಶ್ರೇಷ್ಠ ಸಮಾಜ ಸೇವಕರಾಗಿ ಗುರುತಿಸಿ ಕೊಂಡಿರುವರು.
ಬಾಲ್ಯದಿಂದಲೇ ಕಷ್ಟಕರ ಜೀವನವನ್ನರಿತ ಸುರೇಶ್ ಸಣ್ಣ ಪ್ರಾಯದಲ್ಲೇ ಸಮಾಜದ ಬಗ್ಗೆ ಅಪಾರ ಕಾಳಜಿ ಮೂಡಿಸಿ ಕೊಂಡವರು. ತನ್ನ ದುಡಿಮೆ ಬಹುಪಾಲನ್ನು ಬಡಬಗ್ಗರಿಗೆ, ಆಥಿರ್üಕ ಸಂಕಷ್ಟ ಎದುರಿಸುವ ವಿದ್ಯೆವಂಚಿತ, ಅನಾರೋಗ್ಯ ಪೀಡಿತರ ನೆರವಿಗೆ, ದೈವ-ದೇವಸ್ಥಾನ, ಮಂದಿರ, ಸಮಾಜ ಸಂಸ್ಥೆಗಳಿಗೆ ದಾನವಾಗಿ ನೀಡುತ್ತಾ ಬಂದಿರುವ ಓರ್ವ ನಿಸ್ವಾರ್ಥ ಮನಸ್ಸಿನ ನಿಷ್ಕಲಂಕ ವ್ಯಕ್ತಿತ್ವದ ಸಮಾಜ ಸೇವಕ. ಹಿಂದುಳಿದ ಭಂಡಾರಿ ಸಮಾಜದಲ್ಲಿ ಹುಟ್ಟಿದ ಅವರು ಬಾಲ್ಯದಲ್ಲಿ ಎದುರಿಸಿದ ಕಷ್ಟಗಳನ್ನು, ಬಡತನದ ಬೇಗೆಯನ್ನು ಇಂದಿಗೂ ಮರೆಯದೆ ತಾನು ನಡೆದು ಬಂದ ಹಾದಿಯನ್ನು ಮನವರಿಸಿ ಸಮಾಜಮುಖಿ ಸೇವೆಯ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಂಡಿದ್ದು, ಇಂದು ನಾಡಿನಾದಾದ್ಯಂತದ ಜನರ ಅಪಾರವಾದ ಪ್ರೀತಿಗೆ ಪಾತ್ರರಾಗಿ ಹೆಚ್ಚು ಪ್ರಚಲಿತದಲ್ಲಿದ್ದಾರೆ.
ರಾಷ್ಟ್ರದಾದ್ಯಂತದಲ್ಲಿನ ಭಂಡಾರಿ ಸಮಾಜದವರನ್ನು ಒಗ್ಗೂಡಿಸಿ ತನ್ನ ದೂರದೃಷ್ಟಿತ ಮತ್ತು ನಿರ್ಭೀತ ನಾಯಕತ್ವದಿಂದ ಸಂಘವನ್ನು ಬಲಾಢ್ಯಗೊಳಿಸಿ ಭಂಡಾರಿ ಸಮಾಜದ ಭರತನಾಗಿದ್ದಾರೆ. ಇವರ ಶ್ರಮ ಕಲೆ, ಸಾಹಿತ್ಯ, ಪ್ರತಿಭಾ ವಿಕಸನಕ್ಕೆ ಪೂರಕವಾಗಿದ್ದು ಇವರಲ್ಲಿನ ಪ್ರತಿಭಾ ಪೆÇ್ರ್ರೀತ್ಸ್ಸಹ, ಸೇವಾ ಮನೋಭಾವಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿವೆ. ಕೇವಲ ಸ್ವಸಮಾಜ ಮಾತ್ರವಲ್ಲ, ನಾಡಿನಾದ್ಯಂತದ ನೂರಾರು ಸಮುದಾಯ, ಸಮಾಜಗಳ ಉದ್ಧಾರಕ್ಕೂ ಶ್ರಮಿಸಿ ಬಂಧುತ್ವದ ಭಾವೈಕ್ಯತೆ ಮುಖೇನ ಗುರುತಿಸಿಕೊಂಡಿದ್ದಾರೆ. ಸಮಾಜದಲ್ಲಿನ ಜಾತಿ, ಮತ, ಧರ್ಮ, ಬೇಧಭಾವಗಳ ತಾರತಮ್ಯವಿರಿಸದೆ ವಿಶಾಲ ಸೇವೆ ಮನೋಭಾವದಿಂದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ಸುರೇಶ್ ಭಂಡಾರಿ ಅಚ್ಚುಮೆಚ್ಚಿನ ಕ್ರಿಯಾಶೀಲ ಉದ್ಯಮಿಯಾಗಿದ್ದಾರೆ. ಕೈಗಾರಿಕೆಗಳ ಸ್ಥಾಪನೆಯಾದರೆ ಹುಟ್ಟೂರ ಜಿಲ್ಲೆಯ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಬಹುದೆಂಬ ಆಶಯ ಅವರದ್ದಾಗಿದ್ದು, ಉಪ ಕೈಗಾರಿಕೆಗಳು ಅಭಿವೃದ್ಧಿಗೆ ಆದ್ಯತೆ ಕೊಡುತ್ತಿದ್ದು ಪರಿಸರಕ್ಕೆ ಮಾರಕವಲ್ಲದ ಉದ್ಯಮಗಳು ನಿರುದ್ಯೋಗ ಸಮಸ್ಯೆ ಸಂಪೂರ್ಣ ಶಮನಗೊಳಿಸ ಬಲ್ಲವು ಎಂಬ ಕನಸು ಹೊತ್ತು ಯುವ ಜನತೆಗೆ ಮತ್ತು ಹುಟ್ಟೂರ ಜನತೆಗೆ ಪೆÇ್ರೀತ್ಸಹಿಸುವ ಕಾಳಜಿವುಳ್ಳ ಇವರು ಸಮಾಜ ಸೇವಕರಾಗಿ ಸೇವಾನಿರತರಾಗಿದ್ದಾರೆ. ತುಳುನಾಡು ಮತ್ತು ಮಾತೃಭಾಷೆಯಲ್ಲಿ ಅಪಾರ ಕಾಲಜಿ, ಪ್ರೀತಿ, ಗೌರವ ಹೊಂದಿರುವ ಅವರು ತುಳು ಭಾಷೆಯನ್ನು ರಾಷ್ಟ್ರಮಾನ್ಯತಾ ಭಾಷೆ ಆಗಿಸುವಲ್ಲಿ ಸಕ್ರೀಯರಾಗಿದ್ದಾರೆ.
ಸೇವೆಯು ಭಗವಂತನಿಗೆ ನೀಡುವ ತೆರಿಗೆ ಆಗಿದೆ. ತಾನು ಬೆಳೆದು ಸಮಾಜವನ್ನು ಬೆಳೆಸಿದಾಗ ಮಾನವ ಜೀವನ ಪಾವನವಾಗುವುದು. ಧರ್ಮಪಾಲರು ಅಂದರೆ ಧರ್ಮವನ್ನು ಪಾಲನೆ ಮಾಡುವವರು. ಇದಕ್ಕೆ ಸರಿಸಮಾನರಾಗಿ ಬಾಳುವ ಸುರೇಶ್ ಭಂಡಾರಿ ಪರಿಶುದ್ಧ ಮನಸ್ಸುವುಳ್ಳವಾರಾಗಿ ಶ್ರೀ ಸತ್ಯನಾರಾಯಣರಂತೆ ನಿಷ್ಠೆವುಳ್ಳವರು. ಸ್ವಪ್ರಯತ್ನದಿಂದ ಉದ್ಯಮಿಗಳಾಗಿ ತನ್ನೊಂದಿಗೆ ಇತರರನ್ನೂ ಉತ್ತೇಜಿಸಿದ ಪ್ರಾಮಾಣಿಕ ಉದ್ಯಮಿಯಾಗಿದ್ದಾರೆ. ಮಹಾಪ್ರಯತ್ನ, ದೇವರ ಅನುಗ್ರಹ ಮತ್ತು ಅನುಭವಗಳ ತ್ರಿಸಂಗಮಗಳಿಂದ ಉದ್ಯಮ ಸಾರ್ಥಕವಾದರೆ ಅನುಭವ ವಿನಿಮಯದಿಂದ ಎಲ್ಲವೂ ಸುಗಮವಾಗುವುದು ಇವೆಲ್ಲವುಗಳ ಪರಸ್ಪರ ಸಹಕಾರದಿಂದ ಸಮಾಜದ ಏಳಿಗೆ ಸಾಧ್ಯ ಎಂದು ತಿಳಿದ ಸಾಮಾಜಿಕ ಚಿಂತನೆಯ ಸಕಾರಮೂರ್ತಿ ಆಗಿ ದಕ್ಷ ಮತ್ತು ಸಮರ್ಥ ನಾಯಕತ್ವದ ಸದ್ಗುಣವಂತನಾಗಿ ಅವರ ಕಠಿಣ ಪರಿಶ್ರಮದ ಸಾಧನೀಯ ಹೆಜ್ಜೆಗಳನ್ನಿರಿಸಿ ಮುಂಬಯಿ ಪ್ರಸಿದ್ಧ ಹಾಗೂ ಸರ್ವಶ್ರೇಷ್ಠ ಸಮಾಜ ಸೇವಕರಾಗಿಸಿ, ಕೈಗಾರಿಕೋದ್ಯಮಿ ಆಗಿ ಜನಪ್ರಿಯರ ಮುಂಚೂಣಿಯಲ್ಲಿರುವ ಇವರ ಸಮಾಜ ಸೇವೆಯನ್ನು ಅಳೆಯಲು ಮಾಪಣಗಳೇ ಸಿಗಲಾರವು.
ಭಂಡಾರಿ (ಸವಿತಾ) ಸಮಾಜವನ್ನು ಸರ್ವೋಭಿವೃದ್ಧಿಯ ಪಥದತ್ತ ಒಯ್ಯುತ್ತಾ ಅಖಂಡ ಸಮಾಜದ ಧೀಶಕ್ತಿ ಆಗಿರುವ ಶ್ರೀ ಕಡಂದಲೆ ಸುರೇಶ್ ಎಸ್.ಭಂಡಾರಿ ಇವರು ಜಾಗತಿಕ ಭಂಡಾರಿ ಸಮಾಜ ಸಂಸ್ಥೆಗಳ ಒಕ್ಕೂಟ ಭಂಡಾರಿ ಮಹಾ ಮಂಡಲ ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಭಂಡಾರಿ ಸಮುದಾಯದ ಧೀಮಂತ ಧುರೀಣರಾಗಿರುವರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರರು ಮತ್ತು ಅಧ್ಯಕ್ಷರಾಗಿ, ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕರಾಗಿ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷರಾಗಿ, ಅನಘಾ ಇಂಟರ್‍ನೇಶನಲ್ ಸಂಸ್ಥೆಯ ಮಾಲೀಕರು. ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ (ನೋ.) ಕಪ್‍ಪರೇಡ್ ಮುಂಬಯಿ ಇದರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಉದಾರ ದಾನಿ (ಫಿಲಾಂಥ್ರಾಪಿಸ್ಟ್), ಸಮಾಜ ಸೇವಕ.
ಭಂಡಾರಿ ಮಹಾ ಮಂಡಲದ ಮೂಲಕ ತನ್ನ ಸಮಾಜದ ಅಭ್ಯುದಯ ಕಾರ್ಯದೊಂದಿಗೆ ಇತರ ಸಮಾಜದ ಮೇಲೆ ತಮ್ಮ ಪ್ರೀತಿ, ಕಾಳಜಿ, ಸ್ತುತ್ಯರ್ಹ. ಕಚ್ಚೂರು ಶ್ರೀ ನಾಗೇಶ್ವರ ದೇವರು ಮತ್ತು ಸಮಾಜದ ಪ್ರೀತಿಗಾಗಿ ತಮ್ಮ ಉಸ್ತುವಾರಿಯಲ್ಲಿ ನಡೆದ ನಾಗಮಂಡಲ ಸೇವೆ ಅಭೂತಪೂರ್ವವಾಗಿ ನೆರವೇರಿಸಿ ಧಾರ್ಮಿಕ ಮುಖಂಡ ಎಣಿಸಿರುವರು. ನಿಸ್ವಾರ್ಥ ಸಮಾಜದ ಕಾರ್ಯಕ್ಕೆ ಮುಂಬಯಿಗೆ ಮುಂಬಯಿಯೇ ಮೂಕವಿಸ್ಮಿತರಾಗುತ್ತಿದೆ ಎಂದರೂ ತಪ್ಪಾಗಲಾರದು. ಗಳಿಕೆಯ 90% ಲಾಭಾಂಶವನ್ನು ಸಮಗ್ರ ಸಮುದಾಯಗಳ ಬಡಜನತೆಯ ಸೇವೆಗೆ ಮೀಸಲಾಗಿಸಿ ತನಗೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವ ನಾಣ್ದುಡಿಗೆ ಶಿರ್ಷಿಕೆ ಬರೆದ ಕೊಡುಗೈದಾನಿ ಆಗಿದ್ದಾರೆ. ಸುರೇಶ್ ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕಂಬೈನ್ಸ್ ಪ್ರಸ್ತುತಿಯಲ್ಲಿ ಸುಪುತ್ರ ಯುವೋದ್ಯಮಿ, ಭಂಡಾರಿ ಸಮಾಜದ ಯುವ ನಾಯಕ, ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಇವರು ನಾಯಕ ನಟ ಅಭಿನಯದೊಂದಿಗೆ `ಅಂಬರ್ ಕೇಟರರ್ಸ್' ಚಲನಚಿತ್ರ ನಿರ್ಮಿಸುತ್ತಿರುವುದು ಈ ಕುಟುಂಬದ ಮಾತೃಭಾಷೆ ಮತ್ತು ಸಂಸ್ಕೃತಿಯ ವ್ಯಾಮೋಹ ಅನನ್ಯವಾದದ್ದು.
ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರಿಗೂ ಇವರು ಅಕ್ಕರೆಯ `ಸುರೇಶಣ್ಣ'. ತನ್ನನ್ನೇ ನಂಬಿ ಬದುಕಿರುವ ಕಾರ್ಮಿಕ ಬಂಧುಗಳಿಗೆ, ನಂಬಿಗಸ್ಥರಿಗೆ ಇವರು ನೆಚ್ಚಿನ `ಅಣ್ಣಾ', ಪ್ರಾಮಾಣಿಕ ಕೆಲಸಗಾರರನ್ನು ಆದರದಿಂದ ಸ್ವಾಗತಿಸುವ ಸಹೃದಯಿ. ಅಪಾರ ದೈವ ಭಕ್ತಿಯುಳ್ಳ ಸುರೇಶ್ ಭಂಡಾರಿ ಸಕ್ರಿಯವಾಗಿ ಭಾಗವಹಿಸುವ ಧಾರ್ಮಿಕ ಕಾರ್ಯಕ್ರಮಗಳ ಸಂಖ್ಯೆ ಅಪಾರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅದೆಷ್ಟೂ ದೈವ-ದೇವಸ್ಥಾನಗಳಿಗೆ, ದೇವಾಲಯಗಳ ಜೀರ್ಣೋದ್ಧಾರ, ನವೀಕರಣ, ಬ್ರಹ್ಮಕಲಶಾದಿ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿದವರು.
ಮುಂಬಯಿಯಲ್ಲಿ ತನ್ನ ಸೇವಾಕಾರ್ಯ ಬಾಹುಳ್ಯವನ್ನು ತಾಯ್ನಾಡಿಗೂ ವಿಸ್ತರಿಸಿ ಸುಮಾರು ಎರಡುವರೆ ದಶಕಗಳಿಂದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಇತ್ಯಾದಿ ರಂಗಗಳಲ್ಲಿ ಸಕ್ರೀಯರಾಗಿ ಕಾರ್ಯ ಪ್ರವೃತ್ತರಾಗಿ ತಮ್ಮ ವ್ಯಕ್ತಿತ್ವಕ್ಕೆ ಪುಟ ಕೊಟ್ಟಂತಿದೆ. ಅದೆಷ್ಟೂ ಧಾರ್ಮಿಕ ಕ್ಷೇತ್ರಗಳಿಗೆ ಲಕ್ಷಾಂತರ ಧನ ಸಂಗ್ರಹಿಸಿ ಕರ್ನಾಟಕದ ಧಾರ್ಮಿಕ ಕ್ಷಿತಿಜದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದಕ್ಕೂ ಒಂದು ಪ್ರಮುಖ ಸ್ಥಾನ ಕಲ್ಪಿಸಿಕೊಟ್ಟಿರುವರು. ಅಂತೆಯೇ ಹುಟ್ಟೂರ ಆರಾಧ್ಯ ದೇವರಾದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕಡಂದಲೆ ಇದರ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಕೊಡುಗೆ ಅಪಾರವಾದುದು. ಮನಿಫೆÇೀಲ್ಡ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ ಇದರ ಅಭಿವೃದ್ಧಿಯ ರೂವಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ಉಲ್ಲೇಖನೀಯ.
ಕಡಂದಲೆಯ ಪವಿತ್ರ ಮಣ್ಣಿನ ಬೋಮರ ಎಂಬಲ್ಲಿ ಜನಿಸಿ ಮುಂಬಯಿಯಲ್ಲಿ ಹಲವು ಉದ್ಯಮಗಳನ್ನು ಪ್ರಾರಂಭಿಸಿ ಮನುಜೀವಿಗಳಿಗೆ ಶ್ರೇಷ್ಠವಾದ ವ್ಯಕ್ತಿತ್ವ ಮೈಗೂಡಿಸಿ ನೂರಾರು ಮಂದಿಗೆ ಉದ್ಯೋಗದಾತರೆಣಿಸಿ, ತಮ್ಮ ಬದುಕಿನೊಂದಿಗೆ ಇತರರಿಗೆ ಆಶ್ರಯವನ್ನು ನೀಡಿ ಸಂತೃಪ್ತ ಜೀವನವನ್ನು ನಡೆಸುತ್ತಿರುವ ಕುಟುಂಬಗಳು ಇಂದು ನೂರಾರು. ಕೊಡುಗೈ ದಾನಿಗಳಾದ ತಾವು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಧನ್ಯತೆಯನ್ನು ಕಾಣಿರೆಂಬ ದಾಸವಾಣಿಯಂತೆ ಇವರು ಸಂಪಾದನೆಯ ಬಹುದೊಡ್ಡ ಪಾಲನ್ನು ಸಾರ್ವಜನಿಕ ಸೇವೆಗಳಿಗೆ ಮೀಸಲಿಟ್ಟವರು. ನಿಮ್ಮಿಂದ ಸಹಾಯ ಪಡೆದು ಉದ್ಧಾರವಾದ ಕುಟುಂಬಗಳು ಅನೇಕ. ಸಮಾಜದಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲಾ ವರ್ಗದವರಿಗೂ ಅಗತ್ಯ ಸಂದರ್ಭಗಳಲ್ಲಿ ಸಹಾಯ ಹಸ್ತವನ್ನು ನೀಡಿ ಎಲ್ಲರಿಗೂ ಅತ್ಮೀಯರೆಣಿಸಿದ ಅಪದ್ಭಂದವರು. ಕಡಂದಲೆಯ ಎಲ್ಲಾ ಕ್ರೀಡೆ ಹಾಗೂ ಧಾರ್ಮಿಕ ಉತ್ಸವಗಳ ಆಚರಣೆಯಲ್ಲಿಯೂ ತಮ್ಮ ಕೊಡುಗೆಯು ಸ್ಮರಣೀಯ ಸಮಾಜ ಸೇವಕ, ವಿಧ್ಯಾಭಿಮಾನಿ ಆಗಿ ಶೈಕ್ಷಣಿಕ ವಿದ್ಯಾಥಿರ್ü ವೇತನ ನೀಡುತ್ತಾ ಜಾತಿಮತ, ಧರ್ಮಪಂಥಗಳ ಭಾವನಾಮುಕ್ತ ಇವರ ಭಾವೈಕ್ಯತಾ ಮನೋಭಾವದ ನಿಸ್ವಾರ್ಥ ಸಮಾಜ ಸೇವೆ ಎಲ್ಲರಿಗೂ ಮಾದರಿ. ಅದೆಷ್ಟೋ ರಕ್ತದಾನ ಶಿಬಿರ, ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಮಾಶಾಸನ ನೀಡುತ್ತಾ ದಕ್ಷ ಸೇವೆಯ ಮುಖಾಂತರವೇ ಜನಾನುರಾಗಿ ಗೆಳೆಯರ ಬಳಗ ಕಡಂದಲೆ ಸಂಸ್ಥೆಯಿಂದ ಹುಟ್ಟೂರ ಸಹೃದಯಿ ಗ್ರಾಮಸ್ಥರ ಪ್ರೀತಿಯ ಗೌರವಕ್ಕೆ ಪಾತ್ರರಾಗಿರುವಿರಿ. ತಮ್ಮ ಅಭೂತಪೂರ್ವ ಸೇವೆಯನ್ನು ಸಲ್ಲಿಸುತ್ತಿರುವ ತಮಗೆ ಸಾರ್ವಜನಿಕವಾಗಿ ಸಾವಿರಾರು ಗೌರವಗಳು ಲಭಿಸಿದ್ದರೂ ಇತ್ತೀಚೆಗೆ ಮಹಾನಗರ ಮುಂಬಯಿಯ ಮೆಗ್ನಾ ಪಬ್ಲಿಷಿಂಗ್ ಸಂಸ್ಥೆಯಿಂದ ಪ್ರಕಾಶಿತ `ಸೊಸೈಟಿ ಐಕಾನ್-2016' ಗೌರವಕ್ಕೆ ಪಾತ್ರರಾಗಿ ಬಾಲಿವುಡ್ ತಾರೆಯರಾದ ಮುಗ್ಧ ಗೋಡ್ಸೆ, ಗುಲ್ಶನ್ ಗ್ರೋವರ್, ಹರ್ಷ್ ಗೋಯೆಂಕಾ ಅವರಿಂದ ಈ ಗೌರವ ಮುಡಿಗೇರಿಸಿ ಕೊಂಡ ಇವರು ನಿಜಕ್ಕೂ ಸರ್ವರ ಆತ್ಮೀಯತೆ ಮತ್ತು ಗೌರವಕ್ಕೆ ಅರ್ಹರು.
ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರದಲ್ಲಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಏಕೈಕ ನಿಸ್ವಾರ್ಥ ಸಮಾಜ ಸೇವಕರಾಗಿ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿರುವ ಅಪ್ರತಿಮ ಹೊರನಾಡ ತುಳು-ಕನ್ನಡಿಗ. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಾದ್ಯಂತ ಸಂಚರಿಸಿ ಜನಸಾಮಾನ್ಯರ, ದೀನದಲಿತರ ಸೇವೆಯಲ್ಲಿ ತನ್ನ ಬದುಕನ್ನು ಮುಡಿಪಾಗಿಸಿರುವರು. ಇವರು ಆಕಸ್ಮಿಕ ಮರಣಕ್ಕೀಡದ ಬಡವರ ಪಾಥಿರ್üೀವ ಶರೀರದ ಅಂತ್ಯಕ್ರಿಯೆಗಳನ್ನು ನಡೆಸುವ ನಿಪುಣರು. ಆಕಸ್ಮಿಕ ಅಥವಾ ಅಪಘಾತಕ್ಕೊಳಾಗಿ ವಿಧಿವಶರಾದ ಜನರ ಮೃತದೇಹಗಳ ವ್ಯವಸ್ಥೆಯನ್ನು ಸ್ವತಃ ಮುಂಚೂಣಿಯಲ್ಲಿದ್ದು ನಡೆಸುತ್ತಿರುವ ಅಪತ್ಕಾಲದ ಬಂಧು. ತುಳು-ಕನ್ನಡ ಮರಾಠಿಗರ ಮನಮನೆಗೆದ್ದ ಹೊರನಾಡ ಅಪ್ರತಿಮ ಪ್ರತಿಭೆ. ಸಶಕ್ತ ಸಮಾಜ ಸೇವಕ.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಭಂಡಾರಿ ಸಮಾಜದ ಸುಪರ್ದಿಗೆ ಬಂದು 25 ವರ್ಷವಾಯಿತು. 1988ರಿಂದ 2013ರ ವರೆಗಿನ ಭಂಡಾರಿ ಸಮಾಜದ ಬೆಳವಣಿಗೆ ಹಾಗೂ ನಮ್ಮ ಕುಲದೇವರ ಸನ್ನಿಧಿಯ ಅಭಿವೃದ್ಧಿ ಸಮಾಜದ ಸಕ್ರೀಯ ಕಾರ್ಯಕರ್ತರ ಅವಿರತ ಸೇವೆ ಮತ್ತು ಸಮಾಜ ಭಾಂದವರ ಉದಾರ ದೇಣಿಗೆ ಸಹಕಾರದಿಂದ ಸಾಧ್ಯವಾಗಿಸಿದ್ದಾರೆ. ಶ್ರೀನಾಗೆಶ್ವರ ದೇವರ ಸೇವೆಯಲ್ಲಿ ತೊಡಗಿಸಿ ಕೊಂಡು ದೇವಸ್ಥಾನದ ಪುನರ್ ನಿರ್ಮಾಣದಲ್ಲಿ `ತೀರ್ಥಮಂಟಪ' ನನ್ನ ಪಾಲಿನ ಕೊಡುಗೆಯಾಗಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಭಂಡಾರಿ ಮಹಾಮಂಡಲದ ನೇತೃತ್ವದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದ ವೃತ್ತಿ ಬಾಂಧವರ ಬೃಹತ್ ಸಮಾವೇಶ, ಕೇಶವಿನ್ಯಾಸ ತರಬೇತಿ ಮತ್ತು ಪ್ರದರ್ಶನ. ಬೃಹತ್ ರಕ್ತದಾನ ಶಿಬಿರ, ತೀರ್ಥಹಳ್ಳಿಯಲ್ಲಿ ನಡೆದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಂಡಾರಿ ಸಮಾಜ ಬಾಂಧವರ ಬೃಹತ್ ಸ್ವಾಭಿಮಾನ ಸಮಾವೇಶ ಯಶಸ್ವಿಯಾಗಿ ನಡೆಸಿದ ಯಶಸ್ವೀ ಸಂಘಟಕ. ಸಮಾಜದ ಸಮೀಕ್ಷೆಯೊಂದಿಗೆ ಆಥಿರ್üಕವಾಗಿ ಹಿಂದುಳಿದ ಬಂಧುಗಳಿಗೆ, ವೈದ್ಯಕೀಯ, ಶಿಕ್ಷಣ, ವಿವಾಹ, ಮನೆ ನಿರ್ಮಾಣ, ಮನೆ ದುರಸ್ಥಿ, ವೈದ್ಯಕೀಯ ಶಸ್ತ್ರ ಚಿಕಿತ್ಸೆಗಾಗಿ ಆಥಿರ್üಕ ಸಹಾಯ ಹಾಗೂ ಕುಲ ಕಸುಬುದಾರರಿಗೆ ಸೆಲೂನ್ ಕುರ್ಚಿಗಳ ವಿತರಣೆ ಮುಂತಾದ ಸಮಾಜ ಸೇವೆಗಳನ್ನು ಭಂಡಾರಿ ಮಹಾಮಂಡಲದ ಮೂಲಕ ನೀಡುವಲ್ಲಿ ಮಹತ್ತರವಾದ ಪಾತ್ರವಹಿಸಿರುವರು. ಭಂಡಾರಿ ಸಮಾಜದ ಮುಖವಾಣಿ ಕಚ್ಚೂರುವಾಣಿ ಪತ್ರಿಕೆ ಸಮಾಜದ ಮತ್ತು ಹಿತೈಷಿಗಳಿಗೆ ಐದು ಸಾವಿರ (5000)ಕ್ಕೂ ಹೆಚ್ಚು ಓದುಗರಿಗೆ ಪತ್ರಿಕೆ ಉಚಿತವಾಗಿ ತಲುಪಿಸುವಲ್ಲಿ ಮಹಾಮಂಡಲ ಯಶÀಸ್ವಿಯಾಗಿದೆ. ಸಾರ್ವಜನಿಕ ಮಾಹಿತಿಗಾಗಿ ಭಂಡಾರಿ ಮಹಾಮಂಡಲ ವೆಬ್‍ಸೈಟ್‍ಗೂ ಮನ್ನಣೆ ನೀಡಿದ ಗಣ್ಯರು ಇವರು.
ಸಮಾಜದ ಸಂಘಟನೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆ, ಶಿವಮೊಗ್ಗ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ, ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಭಂಡಾರಿ ಸಮಾಜ ಬಂಧುಗಳನ್ನು ಎರಡೆರಡು ಬಾರಿ ಭೇಟಿ ಮಾಡಿ ಸಂಘಟಿಸಲಾಗಿದೆ. ಹಿಂದೆ ಇದ್ದ 10-15 ಭಂಡಾರಿ ಸಂಘಟನೆಗಳಿಂದ ಇಂದು 59 ಭಂಡಾರಿ ಸಮಾಜ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಭಂಡಾರಿ ಸಮಾಜದ ಮಹಿಳೆಯರ ಸಂಘಟನೆಗೆ ಒತ್ತು ನೀಡಿದ್ದು, ಅವರಲ್ಲೂ ಸಂಘಟನೆಯಲ್ಲಿ ಸಕ್ರಿಯ ಗೊಳಿಸುವಲ್ಲಿ ಸುರೇಶ್ ಭಂಡಾರಿ ಅವರ ಎತ್ತಿದಕೈ. ಕುಲದೇವರ ಕೇಂದ್ರಸ್ಥಾನ ಕಚ್ಚೂರು ಶ್ರೀ ನಾಗೆಶ್ವರ ದೇವಸ್ಥಾನ ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿ ಇದ್ದದ್ದನ್ನು ದೇವಸ್ಥಾನದ ಸಕ್ರಿಯ ಕಾರ್ಯಕರ್ತರು ಹಾಗೂ ಭಂಡಾರಿ ಮಹಾಮಂಡಲದ ನಿರಂತರ ಪ್ರಯತ್ನದಿಂದಾಗಿ 2011 ನವೆಂಬರ್‍ನಲ್ಲಿ ಭಂಡಾರಿ ಸಮಾಜಕ್ಕೆ ದೇವಸ್ಥಾನ ಶಾಶ್ವತವಾಗಿ ಹಸ್ತಾಂತರಿಸುವಲ್ಲೂ ಶತಪ್ರಯತ್ನ ಇವರ ಪಾಲಿನ ದೊಡ್ಡ ಸಾಧನೆ.
ಪ್ರಹ್ಲಾದನಿಗೆ ಈ ಜಗದಲ್ಲಿ ಎಂತೆಂತಹ ಕಷ್ಟಗಳು ಎದುರಾದರೂ ಶ್ರೀ ಹರಿಯ ನಾಮ ಸ್ಮರಣೆಯಿಂದಲೇ ಎಲ್ಲವನ್ನೂ ಜಯಿಸಿ ಅಮರತ್ವವನ್ನು ಪಡೆದನು. ಪಾಂಡವರನ್ನು ಧ್ವಂಸಗೈಯಲು ಕೌರವರಲ್ಲಿ ಎಷ್ಟೇ ಸೈನ್ಯ ಇದ್ದರೂ ಶತ ಪ್ರಯತ್ನ ಪಟ್ಟರೂ ಅದು ಎಂದೂ ಕೈಗೊಡಲಿಲ್ಲ. ಕಾರಣ ಸತ್ಯವಂತರಾದ ಪಾಂಡವರಿಗೆ ಶ್ರೀ ಕೃಷ್ಣನ ಸಹಾಯವಿತ್ತು. ಇವೆಲ್ಲವನ್ನೂ ಚೆನ್ನಾಗಿ ಅರಿತಾಗ ಪ್ರಕೃತಿಗೆ, ಧರ್ಮಕ್ಕೆ ಚ್ಯುತಿವೆಸಗಿದರೆ ಭಗವಂತನನ್ನು ಧ್ಯಾನಿಸದಿದ್ದರೆ ಮುಂದೆ ನಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಅನೇಕ ನಿದರ್ಶನಗಳು ಜರುಗುತ್ತಲೇ ಇವೆ. ಆದರೂ ಮನುಜ ಇದನ್ನು ಲೆಕ್ಕಿಸದಿರುವುದು ನಮ್ಮೆಲ್ಲರ ದುರ್ದೈವ್ಯ!
ಏನೇ ಇರಲಿ, ಶೃದ್ಧಾ ಭಕ್ತಿಯಿಂದ ಉತ್ತಮ ಕರ್ಮಗಳನ್ನು ಮಾಡಿದಾಗ ಭಕ್ತ ವತ್ಸಲವಾದ ಭಗವಂತ ಯಾವ ರೀತಿ ಫಲವನ್ನು ಕೊಡುತ್ತಾನೆ ಎಂಬುದಕ್ಕೆ ಭಂಡಾರಿ ಸಮುದಾಯದ ನಾಗಮಂಡಲವೇ ಸಾಕ್ಷಿ. ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡುವ ಶಕ್ತಿಯನ್ನು ನನಗೆ ಶ್ರೀ ನಾಗೇಶ್ವರ ನೀಡಲಿ ಹಾಗೇ ನಮ್ಮಲ್ಲರಿಗೂ ಆಯುರಾರೋಗ್ಯ ಕೊಟ್ಟು ನಿರಂತರ ರಕ್ಷಿಸಲಿ ಎಂದು ಸುರೇಶ್ ಭಂಡಾರಿ ಅವರ ಆಶಯವಾಗಿದೆ.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವಕ್ಕೆ ಪಾತ್ರರಾದ ಸುರೇಶ್ ಭಂಡಾರಿ ಮಹಾರಾಷ್ಟ್ರ ಕರ್ನಾಟಕದಾದ್ಯಂತ ಸೇರಿದಂತೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ಮಹಾನೀಯ. ಇವರಿಗೆ ಆದಂತಹ ಸನ್ಮಾನ, ಗೌರವಗಳು ಲೆಕ್ಕಕ್ಕಿಲದಷ್ಟಾಗಿದೆ. ಒಟ್ಟಾರೆ ಇವರು ಸಾಧನಶೀಲ ವ್ಯಕ್ತಿತ್ವ, ಸಮಾಜಪರ ನಿಷ್ಕಳಂಕ ಸೇವಾ ಮನೋಭಾವ ಜನ ಮನ್ನಣೆಗೆ ಪಾತ್ರವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಧರ್ಮಯೋಗಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ನಿಕಟವರ್ತಿ ಆಗಿದ್ದು, ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲಾ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಕೊಲ್ಯ ಮಠಾಧೀಶ ಜಗದ್ಗುರು ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿ (ದೈವಕ್ಯ), ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯಾ ತೀರ್ಥ ಶ್ರೀಪಾದರು, ಕೇಮಾರು ಸಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಶ್ರೀ ಗುರು ರಾಮಾಂಜನೇಯ ಕ್ಷೇತ್ರ ವಜ್ರದೇಹಿ ಮಠ ಗುರುಪುರ ಇದರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಹತ್ತಾರು ಧಾಮಿಕ ಮುಂದಾಳುಗಳ ಪ್ರಶಂಸೆಗೆ ಪಾತ್ರರಾಗಿ ಪೂಜ್ಯನೀಯರುಗಳ ಹಸ್ತದಿಂದ ಗೌರವಿಸಲ್ಪಟ್ಟಿರುವರು. 2009ರ ಉಜಿರೆಯಲ್ಲಿನ ಹಾಗೂ 2012ರ ಅಡ್ಯಾರ್‍ನಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನಗಳ ಗೌರವ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಸಾಧನ ರತ್ನ ಪ್ರಶಸ್ತಿ, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ಗೌರವಾರ್ಪಣೆ, ಜಾರ್ಜ್ ಫೆರ್ನಾಂಡಿಸ್ ಸಾಧನಾ ಪುರಸ್ಕಾರ ಗೌರವಾರ್ಪಣೆ ಇತ್ಯಾದಿ ಸೇರಿದಂತೆ ಇನ್ನೂ ನೂರಾರು ಪುರಸ್ಕಾರ, ಪ್ರಶಸ್ತಿ, ಬಿರುದು, ಸನ್ಮಾನಗಳಿಂದ ಗೌರವಿಸಲ್ಪಟ್ಟಿದ್ದಾರೆ.
ಕೊಡುಗೈದಾನಿ ಆಗಿ ಗುರುತಿಸಲ್ಪಟ್ಟ ಸುರೇಶ್ ಭಂದಾರಿ ಪತ್ನಿ ಶ್ರೀಮತಿ ಶೋಭಾ ಸುರೇಶ್ ಭಂಡಾರಿ, ಸುಪುತ್ರ ಮಾ| ಸೌರಭ್ ಸುರೇಶ್ ಭಂಡಾರಿ ಮತ್ತು ಸುಪುತ್ರಿ ಕು| ಅನಘಾ ಭಂಡಾರಿ ಅವರನ್ನೊಳಗೊಂಡ ಕುಟುಂಬದೊಂದಿಗೆ ಮುಂಬಯಿ ಉಪನಗರದ ಘಾಟ್ಕೋಪರ್ ಪಶ್ಚಿಮದಲ್ಲಿ ಸಾಂಸರಿಕ ಬದುಕು ಸಾಗಿಸುತ್ತಿದ್ದಾರೆ.